*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ನಟ ದರ್ಶನ್ ತೂಗುದೀಪ ಜಾಮೀನು ಭವಿಷ್ಯ ಸೋಮವಾರ ಕೋರ್ಟ್ ನಿರ್ಧಾರ ಮಾಡಿದೆ. ದರ್ಶನ್ ಅವರ ಜಾರ್ಮಿನು ಅರ್ಜಿ ಸಂಬಂಧ ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯದಲ್ಲಿ ವಾದ – ಪ್ರತಿವಾದ ನಡೆದ ನ್ಯಾಯಾಧೀಶರು ನಟ ದರ್ಶನ್ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿ. ವಿ. ನಾಗೇಶ್ ಸ ರ್ಕಾರಿ ಪರ ವಕೀಲ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು.
ಈ ನಡುವೆ ಜಾಮೀನು ಸಿಗದಿರುವ ಕಾರಣಕ್ಕೆ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿರುವ ದರ್ಶನ್ ಅವರಿಗೆ ಇದರಿಂದ ಬೇಸರವಾಗಿರುವುದು ಸುಳ್ಳಲ್ಲ. ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಆಗಸ್ಟ್ 29 ರಿಂದ ಬಳ್ಳಾರಿ ಕೇಂದ್ರ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್ನಲ್ಲಿ ಬಂಧನದಲ್ಲಿ ಇಡಲಾಗಿದೆ. ನಾಳೆಯೊಳಗೆ ಜಾಮೀನು ಸಂಬಂಧ ಪ್ರಕ್ರಿಯೆಗಳನ್ನು ದರ್ಶನ್ ಪತ್ನಿ ಮಾಡಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡತೆ ಆದರೆ ನಾಳೆ ಸಂಜೆಯೊಳಗೆ ಅವರು ಜೈಲಿನಿಂದ ಜಾಮೀನಿನ ಮೇಲೆ ಹೊರ ಬರಲಿದ್ದಾರೆ ಅಂಥ ತಿಳಿದು ಬಂದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್, ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಜೂನ್ 11ರಂದು ಪೊಲೀಸರು ಮೈಸೂರಿನಿಂದ ಬಂಧಿಸಿ ಕರೆತಂದಿದ್ದರು, ಆದರೆ ಈ ವೇಳೇ ಅವರು ಜೈಲಿನಲ್ಲಿರುವ ಇತರೆ ಜೊತೆಗೆ ಸೇರಿಕೊಂಡು ಜೈಲಿನ ಅವರಣದಲ್ಲಿ ನಡೆದುಕೊಂಡಿದ್ದ ಕೊಂಡ ರೀತಿ ವಿವಾದವನ್ನು ಹುಟ್ಟು ಹಾಕಿದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಸದ್ಯ ಅವರು ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ನಟ ದರ್ಶನ್ಗೆ ಬೆನ್ನು ನೋವು ಕೂಡ ಕಾಡುತ್ತಿದ್ದು, ಈ ನಿಟ್ಟಿನಲ್ಲಿ ಆನಾರೋಗ್ಯದ ಕಾರಣವ್ನು ನೀಡಿ ಬೆಂಗಳೂರಿಗೆ ವಾಪಸ್ಸು ಬರುವುದಕ್ಕೆ ಮುಂದಾಗಿದ್ದಾರೆ.