ನವದೆಹಲಿ: ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಅಂತರರಾಷ್ಟ್ರೀಯ ಪ್ಯಾಕ್‌ಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಗೆ ಅನ್ವಯಿಸುವಂತೆ ₹39 ರಿಂದ ಆರಂಭವಾಗುವ ಪ್ರೀ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್‌ನ ಹೊಸ ಐಎಸ್‌ಡಿ ಪ್ಯಾಕ್‌ಗಳನ್ನು ನೀಡಿದೆ. ಈ ಎಲ್ಲಾ ಯೋಜನೆಗಳು 7 ದಿನಗಳ ವ್ಯಾಲಿಡಿಟಿ ಹೊಂದಿರಲಿವೆ.
ಯುಎಸ್‌ಎ ಮತ್ತು ಕೆನಡಾ ದೇಶಗಳಿಗೆ ₹39 ದರದ ಐಎಸ್‌ಡಿ 7 ದಿನಗಳ ವ್ಯಾಲಿಡಿಟಿಯ ಪ್ಲಾನ್ ನೀಡಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು 30 ನಿಮಿಷಗಳ ಕರೆ ಸೌಲಭ್ಯ ಇರಲಿದೆ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಕುವೈತ್, ಟರ್ಕಿ ಮತ್ತು ಬಹ್ರೇನ್ ದೇಶಗಳಿಗೆ ₹99ರ ಪ್ಲಾನ್‌ನಲ್ಲಿ 10 ನಿಮಿಷಗಳ ಕರೆ ಸೌಲಭ್ಯ ಲಭ್ಯ. ಸಿಂಗಪುರ, ಥಾಯ್ಲೆಂಡ್, ಮಲೇಷ್ಯಾ ಮತ್ತು ಹಾಂಗ್‌ಕಾಂಗ್‌ಗೆ ಕರೆ ಮಾಡುವವರಿಗೆ 15 ನಿಮಿಷಗಳ ಕರೆ ಸೌಲಭ್ಯ ಇರುವ ₹59 ರ ಯೋಜನೆ ನೀಡಲಾಗಿದೆ.
ಚೀನಾ, ಜಪಾನ್, ಬೂತಾನ್‌ಗೆ 15 ನಿಮಿಷಗಳ ಕರೆ ಸೌಲಭ್ಯದ ₹89ರ ಪ್ಲಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ₹69 ರ ಬೆಲೆಯ 15 ನಿಮಿಷಗಳ ಕರೆ, ಬಾಂಗ್ಲಾದೇಶಕ್ಕೆ ₹49 ರ ಬೆಲೆಯ 20 ನಿಮಿಷಗಳ ಕರೆ ಹಾಗೂ ಯುಕೆ, ಜರ್ಮನಿ, ಫ್ರಾನ್ಸ್ ಮತ್ತು ಸ್ಪೇನ್‌ಗೆ 10 ನಿಮಿಷಗಳ ಕರೆ ಸೌಲಭ್ಯದ ₹79ರ ಪ್ಲಾನ್ ನೀಡಲಾಗಿದೆ.
ಈ ಹೊಸ ಐಎಸ್‌ಡಿ ರಿಚಾರ್ಜ್ ಪ್ಲಾನ್ ಗಳು ಅಕ್ಟೋಬರ್ 10 ರಿಂದ ಜಾರಿಯಾಗಿದೆ.
11,000 ವಜ್ರಗಳಿಂದ ‘ರತನ್ ಟಾಟಾ ಭಾವಚಿತ್ರ’ ರಚಿಸಿದ ವ್ಯಕ್ತಿ: ವೀಡಿಯೋ ವೈರಲ್ | Ratan Tata