ಶಿವಮೊಗ್ಗ : ಸಿಗಂದೂರಿಗೆ ಪ್ರವಾಸಕ್ಕೆ ಎಂದು ತೆರಳುತ್ತಿದ್ದ ಯುವಕರ ತಂಡ ಒಂದು ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಬದಿಯ ಭತ್ತಕ್ಕೆ ಪಲ್ಟಿಯಾಗಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಯುವಕ ಸಾವನ್ನಪ್ಪಿದ್ದು ಇನ್ನೂ ಹಲವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಎಂಬಲ್ಲಿ ನಡೆದಿದೆ.
ಹೌದು ಕೆರೆಕೋಡಿ ಬಳಿ ಕಾರು ಪಲ್ಟಿಯಾಗಿ ಓರ್ವ ಯುವಕ ದುರ್ಮರಣ ಹೊಂದಿದ್ದಾನೆ. ಬೆಂಗಳೂರು ಜಿಲ್ಲೆಯ ನೆಲಮಂಗಲ ಮೂಲದ ಚಂದನ್ (26) ಎಂಬ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸಿಗಂದೂರಿಗೆ ಪ್ರವಾಸಕ್ಕೆ ಯುವಕರ ತಂಡವನ್ನು ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಭತ್ತದ ಗದ್ದೆಯಲ್ಲಿ ಕಾರು ಪಲ್ಟಿಯಾಗಿದೆ.
ಈ ಒಂದು ಅಪಘಾತದಲ್ಲಿ ನೆಲಮಂಗಲ ಮೂಲದ ಚಂದನ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಇವರ ಜೊತೆಗೆ ಕಾರಿನಲ್ಲಿದ್ದ ಆತನ ಗೆಳೆಯರಾದ ನಂದನ್, ಕೋದಂಡ, ಭರತ್ ಹಾಗೂ ಯೋಗೇಶ್ ಗೆ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.