ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಗಲಭೆಯನ್ನು ಕೇಸ್ ಅನ್ನು ರಾಜ್ಯ ಸರ್ಕಾರ ಹಿಂಪಡೆದ ವಿಚಾರವಾಗಿ, ಪ್ರಹ್ಲಾದ ಜೋಶಿ ಭಯೋತ್ಪಾದಕ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಪ್ರಹ್ಲಾದ ಜೋಶಿ ಭಯೋತ್ಪಾದಕರಲ್ಲ ಜೋಶಿ ದೇಶಭಕ್ತರು. ಸಿಎಂ ಸಿದ್ದರಾಮಯ್ಯನವರೇ ಭಯೋತ್ಪಾದಕರು ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ವಿವಾದಾತ್ಮಕ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ಮೇಲೆ ದಾಖಲಾದ ಕೇಸ್ ಹಿಂಪಡೆದಿದ್ದೀರಿ. ಸಿದ್ದರಾಮಯ್ಯನವರೇ ಭಯೋತ್ಪಾದಕರು ರಾಜ್ಯದಲ್ಲಿ ನೀವು ರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದೀರಿ ಪೊಲೀಸರ ನೈತಿಕತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಹೇಶ್ ತೆಂಗಿನಕಾಯಿ ಕಿಡಿ ಕಾರಿದರು.. ರಾಜಕತೆ ಸೃಷ್ಟಿ ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಆಕ್ರೋಶ ಹೊರ ಹಾಕಿದರು.