ಬೆಂಗಳೂರು : ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಮದು ಗೊತ್ತಿದ್ದರೂ ಅಗೆಯುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಇದು ಅನಾರೋಗ್ಯಕ್ಕೂ ಕಾರಣವಾಗಿದೆ. ಈ ನಡುವೆ ಗುಟ್ಕಾ ಪ್ಯಾಕೇಟ್ ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ.
ಹೌದು, ಬೆಂಗಳೂರಿನ ಯಶವಂತಪುರದ ಜೆಪಿ ಪಾರ್ಕ್ ವಾರ್ಡ್ನಲ್ಲಿರುವ ಮಂಜುನಾಥ್ ಕಾಂಡಿಮೆಂಟ್ಸ್ನಲ್ಲಿ ಗ್ರಾಹಕರೊಬ್ಬರು ಖರೀದಿಸಿದ ವಿಮಲ್ ಗುಟ್ಕಾ ಪಾಕ್ಯೇಟ್ನಲ್ಲಿ ಸತ್ತ ಕಪ್ಪೆ ಮರಿ ಪತ್ತೆಯಾಗಿದೆ. ಗುಟ್ಕಾ ಪ್ಯಾಕೇಟ್‌ನಲ್ಲಿದ್ದ ಸಿಕ್ಕ ಸತ್ತ ಕಪ್ಪೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗುಟ್ಕಾ ಪ್ಯಾಕೇಟ್ ನಲ್ಲಿ ಸತ್ತ ಕಪ್ಪೆ ಪತ್ತೆಯಾದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಗುಟ್ಕಾ ತಿನ್ನುವ ಮುನ್ನ ಇರಲಿ ಎಚ್ಚರ ಎಂಬ ಸಂದೇಶ ಎಲ್ಲೆಡೇ ಹರಿದಾಡುತ್ತಿದೆ. ಈ ವೀಡಿಯೋ ನೋಡಿದ ಗುಟ್ಕಾ ಪ್ರಿಯರಿಗೆ ಆಘಾತ ತಂದಿದೆ.