ತುಮಕೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಇದೆ ಮೊದಲ ಬಾರಿಗೆ ತುಮಕೂರಲ್ಲಿ ಚಾಮುಂಡೇಶ್ವರಿ ದೇವಿಯ ಜಂಬೂ ಸವಾರಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ತಮಟೆ ಸೌಂಡ್ ಗೆ ಗೃಹ ಸಚಿವ ಜಿ ಪರಮೇಶ್ವರ್ ರವರು ಭರ್ಜರಿ ಸ್ಟೆಪ್ ಹಾಕಿದರು.
ಹೌದು ಇಂದು ತುಮಕೂರಲಿ ನಡೆದ ಮೊದಲ ಬಾರಿಯ ಜಂಬೂ ಸವಾರಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಪತ್ನಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಹೆಜ್ಜೆ ಹಾಕಿದರು. ಪರಮೇಶ್ವರ ಜೊತೆ ಅವರ ಅಭಿಮಾನಿಗಳು ಸಹ ನೃತ್ಯ ಮಾಡಿ ಸಾಥ್ ನೀಡಿದರು.