ಮೈಸೂರು : ಮುಡಾ ಹಗರಣದ ಸಂಕಷ್ಟದ ನಡುವೆ ಕೂಡ ಕ್ಷಮಿಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಆಯುಧ ಪೂಜೆ ವಿಜಯದಶಮಿ ಹಾಗೂ ಇಂದು ನಡೆವ ಜಂಬೂ ಸವಾರಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳ ಅಲ್ಲಿ ಅವರು ಭಾಗವಹಿಸಲಿದ್ದಾರೆ. ಇಂದು ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ವೈರಿಗಳು ಇರುತ್ತಾರೆ ಹಿತೈಷಿಗಳು ಕೂಡ ಇರುತ್ತಾರೆ, ನನಗೆ ದೇವರ ಆಶೀರ್ವಾದವಿದೆ ಎಂದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ಧರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಿನ ಜನರಿಗೆ ದಸರಾ ಹಬ್ಬದ ಶುಭಾಶಯಗಳು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು, ನಾಳೆ ನಡೆಯುವ ಜಂಬೂಸವಾರಿಯಲ್ಲಿ ನಾನು ಭಾಗವಹಿಸುತ್ತೇನೆ. ಸುಧೀರ್ಘವಾಗಿ ಹೆಚ್ಚು ಬಾರಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದೇನೆ. ನಾಡಿನ ಜನ ಹಾಗೂ ದೇವರ ಆಶೀರ್ವಾದದಿಂದ ಪುಷ್ಪರ್ಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ಮೇಲೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ಜನರು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಇಷ್ಟೊಂದು ಬಾರಿ ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕಿದೆ. ದೇವರ ಆಶೀರ್ವಾದ ಇದ್ದಿದ್ದಕ್ಕೆ ಇಷ್ಟು ವರ್ಷ ರಾಜಕೀಯದಲ್ಲಿ ಇದ್ದೇನೆ. ಹೊಗಳುವವರು ಇರುತ್ತಾರೆ ತೆಗಳುವವರು ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಆಗಬೇಕು ಸಿದ್ದರಾಮಯ್ಯ ತಿಳಿಸಿದರು.
ಹಳೆ ಹುಬ್ಬಳ್ಳಿ ಗಲಭೆ ಕೆಸ್ ವಾಪಸ್ ಪಡೆದ ವಿಚಾರವಾಗಿ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಬಿಜೆಪಿ ಯಾವಾಗಲೂ ಸುಳ್ಳು ವಿಚಾರಕ್ಕೆ ಹೋರಾಟ ಮಾಡುತ್ತದೆ ಹಾಗಾಗಿ ಈ ಬಗ್ಗೆ ಪರಿಶೀಲನೆ ಮಾಡಿದ ನಂತರ ಮಾತನಾಡುತ್ತೇನೆ. ಜಾಹೀರಾತಿನ ಕುರಿತು ವಿಪಕ್ಷಗಳು ಟೀಕಿಸುವ ವಿಚಾರವಾಗಿ ಮಾತನಾಡಿದ ಅವರು, ವಿಜಯನಗರದ ಅರಸರು ವಿಜಯದ ಸಂಕೇತವಾಗಿ ದಸರಾ ಆಚರಿಸುತ್ತಿದ್ದರು. ಮೈಸೂರು ಅರಸರು ಕೂಡ ಅದನ್ನೇ ಮುಂದುವರೆಸಿದರು. ಇವತ್ತು ಕೂಡ ಅದೇ ಸಂಪ್ರದಾಯ ಮುಂದುವರೆದಿದೆ. ಜಾಹೀರಾತನ್ನು ಇವತ್ತಿಗೆ ನೀವು ಹೇಗೆ ವ್ಯಾಖ್ಯಾನ ಮಾಡ್ತೀರಾ ಹಾಗೆ ಎಂದು ತಿರುಗೇಟು ಕೊಟ್ಟರು.