ವಿಜಯನಗರ : ಯುವಕ ಯುವತಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ನದಿಯ ಬಳಿ ಈ ಒಂದು ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ನದಿ ತೀರದಲ್ಲಿ ಯುವಕ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ಹಗ್ಗದಲ್ಲಿ ಯುವಕ ಮತ್ತು ಯುವತಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.ಮೃತ ಯುವಕ ಮತ್ತು ಯುವತಿಯ ಗುರುತು ಪತ್ತೆಯಾಗಿಲ್ಲ.ಆದರೆ ಯುವಕನ ಮೊಬೈಲ್ ಸಿಕ್ಕಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ.
ನಿನ್ನೆ ಮೈಲಾರ ಲಿಂಗೇಶ್ವರ ದೇವರ ದರ್ಶನಕ್ಕೆ ಯುವತಿ ಮತ್ತು ಯುವಕ ಇಬ್ಬರು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹೊಳಲು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.