ಬೆಂಗಳೂರು: ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕರು ಛಲವಾದಿ ನಾರಾಯಣಸ್ವಾಮಿ ರವರಿಗೆ ಹೊಸಕೋಟೆ CA ನಿವೇಶನದ ಬಿರಿಯಾನಿ ಹೋಟೆಲ್ ಹಗರಣ ಕುರಿತು ಸ್ಪಷ್ಟಕಾರಣ ನೀಡಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕಲ್ಪಿಸಿ, ಇದುವರಿಗೆ ಅವರ ಮೇಲೆ ಬಂದಿರುವ ಆರೋಪಗಳಿಗೆ ಸಾರ್ವಜನಿಕವಾಗಿ ಭಾರತೀಯ ಜನತಾ ಪಕ್ಷ ಉತ್ತರ ನೀಡಲು ಸಾಧ್ಯವಾಗಿಲ್ಲ. ಚಲವಾದಿ ನಾರಾಯಣಸ್ವಾಮಿ ರವರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುವ ಬದಲು ಇವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಸಹಕರಿಸಿ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾರಾದರ್ಶಕವಾದ ತನಿಖೆಗೆ ಅವಕಾಶ ಕಲ್ಪಿಸಿ ಎಂಬುದಾಗಿ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಭಾರತೀಯ ಜನತಾ ಪಕ್ಷದ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ರವರು ಈ ದಿನ ಪತ್ರಿಕಾಗೋಷ್ಠಿ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮೇಲೆ ಹತಾಷೆಯ ಆರೋಪಗಳ ಮಾಡಿರುತ್ತಾರೆ. ಸಿದ್ದರಾಮಯ್ಯ ಮತ್ತು ಖರ್ಗೆ ಕುಟುಂಬವನ್ನು ವ್ಯಕ್ತಿಗತವಾಗಿ ಟೀಕೆ ಮಾಡಿಕೊಂಡು ಬಿಜೆಪಿಯಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿರುವ ಇವರಿಗೆ, ಬಿ ಎಲ್ ಸಂತೋಷ ಕೃಪಾ ಕಟಾಕ್ಷ ಬಿಜೆಪಿ ಹಿರಿಯರನ್ನು ಬದಿಗೆ ತಳ್ಳಿ ಸಾಂವಿಧಾನಿಕ ಹುದ್ದೆ ನೀಡಿದೆ ಎಂದಿದ್ದಾರೆ.
ಈ ದಿನ ಇವರು ವಿಶೇಷವಾಗಿ ಕರ್ನಾಟಕದ ವಾಲ್ಮೀಕಿ ನಿಗಮದ ಹಗರಣವನ್ನು ಪ್ರಸ್ತಾಪಿಸಿ ಹಲವಾರು ಸುಳ್ಳು ಆರೋಪಗಳನ್ನು ಮಾಡಿರುತ್ತಾರೆ. ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕರ ಮೇಲೆ ED ಪ್ರಕರಣಗಳು ದಾಖಲಾಗಿದ್ದರು, ಅದರ ಬಗ್ಗೆ ಚಕಾರ ಎತ್ತದ ಛಲವಾದಿ ನಾರಾಯಣಸ್ವಾಮಿ ರವರು ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುವುದು ಜನಕ್ಕೆ ತಿಳಿಯುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಯಾವ ಕಾರಣಕ್ಕೆ ED ಸಂಸ್ಥೆಯು ವಾಲ್ಮೀಕಿ ಪ್ರಕರಣದಲ್ಲಿ ಪತ್ರಿಕಾ ಹೇಳಿಕೆಯನ್ನು ಅಥವಾ ಪ್ರತಿಕ ಟಿಪ್ಪಣಿಯನ್ನು ನೀಡಿದ ರೀತಿಯಲ್ಲಿ ಸನ್ಮಾನ್ಯ ವಿಜಯೇಂದ್ರರವರ ಮೇಲೆ ED ಪ್ರಕರಣಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವುದಿಲ್ಲ. ED ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆರವರ ಪ್ರಕರಣ ಬಹಳ ದಿನಗಳಿಂದ ಬಾಕಿ ಇದ್ದು ಅದನ್ನು ತೆರವುಗೊಳಿಸುವ ಅಥವಾ ತನಿಕೆಯಲ್ಲಿ ಮುಂದುವರೆಯುವ ಪ್ರಾಮಾಣಿಕ ಪ್ರಯತ್ನವನ್ನು ಇಡಿ ಸಂಸ್ಥೆ ಇಲ್ಲಿಯವರೆಗೆ ಮಾಡಿರುವುದಿಲ್ಲ.ಇದಕ್ಕೆ ಉತ್ತರ ನೀಡದೆ ಪಲಾಯನ ಮಾಡುವ ಭಾರತೀಯ ಜನತಾ ಪಕ್ಷದ ನಾಯಕರು ಕೇವಲ ಜನರನ್ನು ದಾರಿ ತಪ್ಪಿಸುವ ಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
DB ಚಂದ್ರೆಗೌಡ, MC ನಾಣಯ್ಯ, BSY, ನಂಜೇಗೌಡ, KH ಶ್ರೀನಿವಾಸ್ ಮುಂತಾದ ಹಿರಿಯರು ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸದನದ ಗೌರವ ಮತ್ತು ಪಾವಿತ್ರತೆ ಎತ್ತಿ ಹಿಡಿದಿದ್ದಾರೆ. ಛಲವಾದಿ ಈ ಪರಂಪರೆ ಮತ್ತು ಸಂಸ್ಕೃತಿ ಗೆ ಕಳಂಕ ಬರುವ ರೀತಿಯಲ್ಲಿ ನಡೆದುಕೊಳ್ಳುವ ಬದಲು ಆ ಸ್ಥಾನವನ್ನು ತ್ಯಜಿಸುವುದು ಒಳ್ಳೇದು ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಸಂಘದ ಚುನಾವಣೆಯಂದು ಮತಚಲಾಯಿಸಲು ‘ವಿಶೇಷ ಅನುಮತಿ’
ಬೆಂಗಳೂರಿನ ‘ಆಸ್ತಿ ಮಾಲೀಕ’ರಿಗೆ ಗುಡ್ ನ್ಯೂಸ್: ಶೀಘ್ರವೇ ‘ಬೆಂಗಳೂರು ಒನ್ ಕೇಂದ್ರ’ದಲ್ಲೂ ‘ಇ-ಖಾತಾ’ ಲಭ್ಯ