ಕಲಬುರ್ಗಿ : ಬಾಲಕಿಯರು ಇಬ್ಬರು ಬಟ್ಟೆ ತೊಳೆಯಲು ಎಂದು ಭೀಮಾನದಿಗೆ ತೆರಳಿದ್ದಾರೆ. ಈ ವೇಳೆ ಬಟ್ಟೆ ತೊಳೆದ ಬಳಿಕ ನದಿಯಲ್ಲಿ ಈಜಾಡುತ್ತಿದ್ದಾಗ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಅಫ್ಜಲ್ ಪುರ ತಾಲೂಕಿನಲ್ಲಿ ನಡೆದಿದೆ.
ಹೌದು ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ. ಭೂಮಿಕಾ ದೊಡ್ಮನಿ (8) ಶ್ರಾವಣಿ ನಾಟಿಕಾರ್ (11) ನೀರು ಪಾಲಾಗಿರುವ ದುರ್ದೈವಿಗಳು ಎಂದು ತಿಳಿದು ಬಂದಿದೆ. ಭೀಮಾ ನದಿಯಲ್ಲಿ ಈ ಬಾಲಕಿಯರು ಬಟ್ಟೆ ತೊಳೆಯಲು ಎಂದು ಹೋಗಿದ್ದರು. ಬಟ್ಟೆ ತೊಳೆದ ನಂತರ ಬಾಲಕಿಯರು ನದಿಯಲು ಈಜಾಡಲು ಮುಂದಾಗಿದ್ದಾರೆ.
ನದಿ ನೀರಿನ ರಭಸಕ್ಕೆ ಭೂಮಿಕಾ ದೊಡ್ಮನೆ ಕೊಚ್ಚಿ ಹೋಗುತ್ತಿದ್ದಳು. ಕೂಡಲೇ ಭೂಮಿಕಾಳನ್ನು ರಕ್ಷಿಸಲು ಹೋಗಿದ್ದ ಶ್ರಾವಣಿ ಕೂಡ ನೀರು ಪಾಲಾಗಿದ್ದಾಳೆ. ಭೀಮಾ ನದಿ ನೀರಿನ ರಭಸಕ್ಕೆ ಇಬ್ಬರು ಬಾಲಕಿಯರು ಕೊಚ್ಚಿ ಹೋಗಿದ್ದಾರೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶ್ರಾವಣಿ ನಾಟಿಕರ್ ಶವವನ್ನು ಹೊರ ತೆಗೆದಿದ್ದಾರೆ.
ಚಿಂಚೋಳಿ ಗ್ರಾಮದ ಶ್ರಾವಣಿ ನಾಟಿಕಾರ್ ಮೃತ ದುರ್ದೈವಿ ಎನ್ನಲಾಗುತ್ತಿದ್ದು, ಇನ್ನೊರ್ವ ಬಾಲಕಿ ಭೂಮಿಕಾ ದೊಡ್ಮನಿ ಶವಕ್ಕಾಗಿ ನದಿಯಲ್ಲಿ ಇದೀಗ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭಿಮಾ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಫ್ಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.