ಚಿಕ್ಕಮಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಸಂಕಷ್ಟಕ್ಕೆ ಸಿಲುಕಿದ್ದು, ಇದರ ಮಧ್ಯ ಸಿಎಂ ಬದಲಾವಣೆ ಕುರಿತು ಕೂಗು ಕೇಳಿ ಬಂದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ನಂತರ ಮತ್ತೊಬ್ಬ ಭವಿಷ್ಯದ ನಾಯಕ ಅಂದರೆ ಸತೀಶ್ ಜಾರಕಿಹೊಳಿ ಎಂದು ಪರೋಕ್ಷವಾಗಿ ಸತೀಶ್ ಮುಂದಿನ ಸಿಎಂ ಎಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು.
ಚಿಕ್ಕಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ಯವರು ಸರಳ ಸಜ್ಜನ ರಾಜಕಾರಣಿ. ಸಿಎಂ ಸಿದ್ದರಾಮಯ್ಯ ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ನಂತರ ಮತ್ತೊಬ್ಬ ನಾಯಕ ಇದ್ದರೆ ಅದು ಸತೀಶ್ ಜಾರಕಿಹೊಳಿ ಎಂದು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆಯಲ್ಲಿ ಶಾಸಕ ಎಚ್.ಡಿ ತಮ್ಮಯ್ಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಸತೀಶ್ ಜಾರಕಿಹೊಳಿಯವರೇ ಭವಿಷ್ಯದ ನಾಯಕರು. ಸತೀಶ್ ಜಾರಕಿಹೊಳಿಯವರ ರೀತಿ ಸರಳ-ಸಜ್ಜನ ಮನುಷ್ಯ ಮತ್ತೊಬ್ಬರಿಲ್ಲ. ಸಿದ್ದು ನಂತರ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ನಾಯಕನಿದ್ದರೆ ಅದು ಸತೀಶ್ ಜಾರಕಿಹೊಳಿಯವರೇ. ಒಂದು ಕಡೆ ಡಿಕೆಶಿ ಸಿಎಂ ಕನಸು ಕಾಣುತ್ತಿದ್ದಾರೆ. ಇನ್ನೊಂದು ಕಡೆ ಸತೀಶ್ ಜಾರಕಿಹೊಳಿಯವರ ಹೆಸರು ಮುನ್ನೆಲೆಯಲ್ಲಿದೆ. ಈ ಮಧ್ಯೆ ತೆರೆಮರೆಯಲ್ಲಿ ಖರ್ಗೆ-ಪರಮೇಶ್ವರ್ ಕಸರತ್ತಿನ ವದಂತಿಗಳು ಜೋರಾಗಿವೆ ಎಂದು ಹೇಳಿದರು.