ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ವೈಯ್ಯಾಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿ ಆಗಿದ್ದ ಮುಕ್ತಿ ರಂಜನ್ ರಾಯ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನ್ನ ಡೆತ್ ನೋಟ್ನಲ್ಲಿ ಮಹಾಲಕ್ಷ್ಮಿ ಕುರಿತ ಹಲವು ವಿಷಯಗಳನ್ನು ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದಾನೆ.
ಹೌದು ಮುಕ್ತಿ ರಂಜನ್ ರಾಯ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಮಹಾಲಕ್ಷ್ಮಿ ಕುರಿತಂತೆ ಹಲವು ವಿಷಯಗಳನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಹಲವು ವಿಷಯಗಳು ಪೊಲೀಸರ ತನಿಖೆಯ ವೇಳೆ ಬಹಿರಂಗವಾಗಿವೆ. ಡೆತ್ ನೋಟ್ ನಲ್ಲಿ ನಾನು ಅವಳನ್ನು ಕೊಲ್ಲದಿದ್ದರೆ ನನ್ನನ್ನು ಕೊಲ್ಲುತ್ತಿದ್ದಳು ಅಂತ ಆತ್ಮಹತ್ಯೆ ಮಾಡಿಕೊಂಡ ಹಂತಕ ಮುಕ್ತಿ ರಂಜನ್ ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ ಮಹಾಲಕ್ಷ್ಮಿ ಕೊಲೆ ರಹಸ್ಯ ಈಗ ಬಯಲಾಗಿದೆ.
ಡೆತ್ ನೋಟ್ ನಲ್ಲಿನ ರಹಸ್ಯ ಏನು?
ಮಹಾಲಕ್ಷ್ಮಿ ತನ್ನನ್ನು ಕೊಲ್ಲಲು ಮುಂದಾಗಿದ್ದಳು ಮತ್ತು ದೇಹವನ್ನು ಎಸೆಯುವುದಕ್ಕೆ ಕಪ್ಪು ಸೂಟ್‌ಕೇಸ್ ಸಹ ಖರೀದಿಸಿದ್ದಳು ಎಂದು ಬರೆದಿದ್ದಾನೆ. ಇದಕ್ಕೆ ಸರಿಯಾಗಿ ಮಹಾಲಕ್ಷ್ಮಿ ಮನೆಯೊಳಗಿನ ಫ್ರಿಡ್ಜ್ ಬಳಿ ಕಪ್ಪು ಸೂಟ್ಕೇಸ್ ಕೂಡ ಪತ್ತೆಯಾಗಿತ್ತು.ನನ್ನನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ಹಾಕಿ ನಂತರ ಎಸೆಯುವುದು ಅವಳ ಉದ್ದೇಶವಾಗಿತ್ತು.
ನಾನು ಅವಳನ್ನು ಕೊಲ್ಲದಿದ್ದರೇ, ಮಹಾಲಕ್ಷ್ಮಿ ನನ್ನನ್ನು ಕೊಂದು ನನ್ನ ದೇಹವನ್ನು ಎಸೆಯುತ್ತಿದ್ದಳು. ನಾನು ಅವಳನ್ನು ಆತ್ಮರಕ್ಷಣೆಗಾಗಿ ಕೊಂದಿದ್ದೇನೆ. ಚಿನ್ನದ ಸರ ಮತ್ತು 7 ಲಕ್ಷ ರೂ. ನೀಡಿದ್ದರೂ ಸಹ ಮಹಾಲಕ್ಷ್ಮಿಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಅದಕ್ಕಾಗಿ ಆಕೆಯೂ ನನ್ನನ್ನು ಥಳಿಸಿದ್ದಾಳೆ. ಆಕೆಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿರುವಾಗ ಮಹಾಲಕ್ಷ್ಮಿ ನನ್ನನ್ನು ಥಳಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ.