ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ತಮ್ಮನಿಸಿದಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ಕೊಲೆ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ರೇಣುಕಾಸ್ವಾಮಿ ಪವಿತ್ರಗೌಡ ಮೆಸೇಜ್ ಮಾಡುತ್ತಿದ್ದಾಳೆ ಎಂದು A3 ಆರೋಪಿ ಪವನ್ ಮೆಸೇಜ್ ಗೆ ಪ್ರತ್ಯುತ್ತರ ನೀಡುತ್ತಿದ್ದ.ಪವಿತ್ರ ಗೌಡಗೆ ತನ್ನ ಮರ್ಮಾಂಗದ ಫೋಟೋ ಕಳುಹಿಸಿದಾಗ ಪವಿತ್ರಗೌಡ ಸೂಪರ್ ಎಂದಿದ್ದಾರೆ. ಆಗ ಕೊಲೆ ಮಾಡುವ ಹಂತಕ್ಕೆ ಹೋಗದೆ ಬ್ಲಾಕ್ ಮಾಡಿ ರಿಪೋರ್ಟ್ ಮಾಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದರು ಎಂದು ವಾದಿಸಿದರು.
ಇದಕ್ಕೂ ಮುನ್ನ ಕಳೆದ ವಿಚಾರಣೆಯ ವೇಳೆ ಪೊಲೀಸರ ಹಲವು ಲೋಪಗಳನ್ನು ಎತ್ತಿ ಹಿಡಿದು ದರ್ಶನ್ ಪರ ವಕೀಲರಾದಂತಹ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಇದಕ್ಕೆ ಪ್ರಸನ್ನ ಕುಮಾರ್ ಅವರು ಎಲ್ಲ ಪ್ರಶ್ನೆಗಳಲು ನಮ್ಮಲ್ಲಿ ಉತ್ತರವಿದೆ ಎಂದು ಕೊನೆಯಲ್ಲಿ ತಿಳಿಸಿದ್ದರು. ಇಂದು ಅದಕ್ಕೆ ಪ್ರತಿಯಾಗಿ ಪೊಲೀಸ್ ಪರ ವಕೀಲ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಮಾಧ್ಯಮಗಳಿಗೆ ಪೊಲೀಸರಿಂದ ಮಾಹಿತಿ ಸೋರಿಕೆಯಾಗಿಲ್ಲ. ಈ ಬಾರಿ ಆರೋಪಿಗಳ ಪರ ವಕೀಲರು ಸಂದರ್ಶನ ಕೊಡುತ್ತಿದ್ದಾರೆ. ಸುದ್ದಿ ಬರಬಾರದೆನ್ನುವರು ಸಂದರ್ಶನ ಯಾಕೆ ಕೊಟ್ಟಿದ್ದು? ಮಾಧ್ಯಮಗಳ ವರದಿಯಿಂದ ಕೇಸ್ ಪೂರ್ವಾಗ್ರಹಕ್ಕೆ ಒಳಗಾಗುವುದು ಎಂಬುವುದು ಸರಿಯಲ್ಲ. ಮಾಧ್ಯಮಗಳಿಗೆ ಪೊಲೀಸರಿಂದ ಮಾಹಿತಿ ಸೋರಿಕೆಯಾಗಿಲ್ಲ ಎಂದು ವಾದಿಸಿದರು.
ಕೇಸ್ ಆರಂಭದ ದಿನದಿಂದಲೂ ಸಂದರ್ಶನ ನೀಡುತ್ತಿದ್ದಾರೆ ನಾನು ಈವರೆಗೂ ಮಾಧ್ಯಮಗಳಲ್ಲಿ ಕೆ ಎಸ್ ಬಗ್ಗೆ ಸಂದರ್ಶನ ನೀಡಿಲ್ಲ.ಈ ವೇಳೆ ರೇಣುಕಾ ಸ್ವಾಮಿ ಮೆಸೇಜ್ ಮಾಡಿರುವುದನ್ನು ಉಲ್ಲೇಖಿಸಿದ ಪ್ರಸನ್ನಕುಮಾರ್, ಗೌತಮ್ ಎಂಬ ಹೆಸರಿನಲ್ಲಿ ರೇಣುಕಾಶ್ ಸ್ವಾಮಿ ಚಾಟ್ ಇದೆ. A1 ಪವಿತ್ರ ಗೌಡ ರೇಣುಕಾ ಸ್ವಾಮಿ ನಡುವಿನ ಮೆಸೇಜ್ ಉಲ್ಲೇಖ ಮಾಡಿದ್ದು, ಡ್ರಾಪ್ ಮಿ ಯುವರ್ ನಂಬರ್ ಎಂಬ ಸಂದೇಶ ಕಳುಹಿಸುತ್ತಾರೆ.
ಫೆಬ್ರವರಿ ಯಿಂದಲೂ ಕೂಡ ರೇಣುಕಾ ಸ್ವಾಮಿ ಮೆಸೇಜ್ ಮಾಡುತ್ತಿದ್ದ.ರೇಣುಕಾ ಸ್ವಾಮಿ ಮೆಸೇಜ್ ಮಾಡುತ್ತಿರುವುದರ ಬಗ್ಗೆ ಪವಿತ್ರಗೌಡಗು ತಿಳಿದಿತ್ತು. ರೇಣುಕಾ ಸ್ವಾಮಿ ಪವಿತ್ರ ಗೌಡಗೆ ಮರವಾಂಗದ ಫೋಟೋ ಕಳುಹಿಸಿದ್ದ ಹೇಗಿದೆ ಅಂದಾಗ ಸೂಪರ್ ಎಂದಿದ್ದಾರೆ ಈ ರೀತಿ ಮೆಸೇಜ್ ಕಳುಹಿಸಿದರೆ ಏನು ಮಾಡಬೇಕು? ಕೇವಲ ಒಂದು ಬಟನ್ ಬ್ಲಾಕ್ ಒತ್ತಬೇಕು. ಬ್ಲಾಕ್ ಮಾಡಿ ರಿಪೋರ್ಟ್ ಮಾಡಿದರೆ ಕ್ರಮವಾಗುತ್ತದೆ. ಇಲ್ಲವೇ ಪೊಲೀಸರಿಗೆ ಕರೆ ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ ಎಂದು ವಾದಿಸಿದರು.