ನವದೆಹಲಿ:ಭಾರತೀಯ ಹಜ್ ಸಮಿತಿಯ ಮೂಲಕ ಮುಂದಿನ ವರ್ಷ ಹಜ್ ಗೆ ಹೋಗುವ 1.2 ಲಕ್ಷ ನಾಗರಿಕರನ್ನು ಸೋಮವಾರ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ
ಹಜ್ -2025 ಗಾಗಿ ಹಜ್ ಸಮಿತಿಯ ಕೋಟಾವನ್ನು 1,22,518 ಯಾತ್ರಾರ್ಥಿಗಳಿಗೆ ನಿಗದಿಪಡಿಸಲಾಗಿದ್ದು, ಒಟ್ಟು 1,51,918 ಸರಿಯಾದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹಜ್ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ
ಮುಂದಿನ ವರ್ಷ ಹಜ್ ಯಾತ್ರೆಗೆ ತೆರಳುವವರನ್ನು ಹಜ್ ಸಮಿತಿಯ ದೆಹಲಿ ಕಚೇರಿಯಲ್ಲಿ ಗಣಕೀಕೃತ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.
ಲಾಟರಿಯನ್ನು ಹಜ್ ಸಮಿತಿ ಅಧ್ಯಕ್ಷ ಎ.ಪಿ.ಅಬ್ದುಲ್ಲಾ ಕುಟ್ಟಿ ಉದ್ಘಾಟಿಸಿದರು.
65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 14,728 ಹಾಜಿಗಳು ಮತ್ತು ‘ಮೆಹ್ರಾಮ್’ (ಪುರುಷ ಸಂಗಾತಿ) ಇಲ್ಲದ 3,717 ಮಹಿಳೆಯರನ್ನು ಲಾಟರಿ ಇಲ್ಲದೆ ಆಯ್ಕೆ ಮಾಡಲಾಗಿದೆ ಎಂದು ಹಜ್ ಸಮಿತಿಯ ಸಿಇಒ ಲಿಯಾಕತ್ ಅಲಿ ಅಫಾಕಿ ತಿಳಿಸಿದ್ದಾರೆ