ಬೆಂಗಳೂರು : ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಅಕ್ರಮವಾಗಿ ಮಧ್ಯ ಮಾರಾಟ ಮಾಡಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಎರಡು ದಾಭಾಗಗಳ ಕ್ಯಾಶಿಯರ್ ವಿರುದ್ಧ FIR ದಾಖಲಾಗಿದೆ.
ನೆಲಮಂಗಲ ನಗರದ ಮನೋಜ್ ಡಾಬಾ ಕ್ಯಾಶಿಯರ್ ನವೀನ್ ಹಾಗೂ ಮಿರಾಕಲ್ ಢಾಬಾ ಕ್ಯಾಶಿಯರ್ ಸಂಜಯ್ ಗೌಡ ವಿರುದ್ಧ ಕೆಎಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿರುವ ಡಾಬಾಗಳು. ಗಾಂಧಿ ಜಯಂತಿಯಂದು ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರುತಿದ್ದರು.
ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಟೌನ್ ಪೋಲೀಸರು ಡಾಬಾ ಗಳ ಮೇಲೆ ದಾಳಿ ಮಾಡಿದ್ದರು. ನೆಲಮಂಗಲದ ಟೌನ್ ಪಿಎಸ್ಐ ಜಯಂತಿ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿತ್ತು. ಅಕ್ಟೋಬರ್ 2ರಂದು ಎಂಸಿಆರ್ ದಾಖಲಿಸಿದ್ದರು. ನ್ಯಾಯಾಲಯದ ಅನುಮತಿ ಪಡೆದು ನವೀನ್ ಸಂಜಯ್ ವಿರುದ್ಧ FIR ದಾಖಲಾಗಿದೆ. ಪ್ರಕರಣ ಕುರಿತಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.