ದಾವಣಗೆರೆ : ಪತಿಯೊಬ್ಬ ತನಗೆ ಕುಡಿಯುವುದಕ್ಕೆ ಹಾಗೂ ವಿಸ್ಪೀಟ್ ಆಡುವುದಕ್ಕೆ ಪತ್ನಿಯ ಬಳಿ ಹಣ ಕೇಳಿದ್ದಾನೆ. ಈ ವೇಳೆ ಪತ್ನಿ ನನ್ನ ಹತ್ತಿರ ಹಣ ಇಲ್ಲ ಎಂದಾಗ ಪತಿ ಹೊಲಕ್ಕೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅಣಿಮೇಗಳ ತಾಂಡಾದಲ್ಲಿ ನಡೆದಿದೆ.
ಮಹಾಂತೇಶ್ ನಾಯ್ಕ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಮದ್ಯಪಾನ ಮತ್ತು ಇಸ್ಟೀಟ್ ಜೂಜಾಟದ ಚಟ ಹೊಂದಿದ್ದ ಮಹಾಂತೇಶ್, ಪತ್ನಿಗೆ ಕರೆ ಮಾಡಿ ನನಗೆ 5 ಸಾವಿರ ರೂಪಾಯಿ ಬೇಕಾಗಿದೆ ಕೊಡು ಎಂದು ಪೀಡಿಸಿದ್ದಾನೆ.
ಪತ್ನಿ ಮೋತಿಬಾಯಿ ಹಣವಿಲ್ಲ ಎಂದು ಹೇಳಿದ್ದಕ್ಕಾಗಿ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಸ್ಥಳೀಯರು ಕೂಡಲೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.