ವಿಜಯಪುರ : ವಕ್ಫ್ ಆಸ್ತಿ ಸರ್ಕಾರದಿಂದ ಒಂದಿಂಚು ತೆಗೆದುಕೊಂಡಿಲ್ಲ ಇದೆಲ್ಲವೂ ದಾನಿಗಳು ಕೊಟ್ಟಿದ್ದು.ವಕ್ಫ್ ಆಸ್ತಿ ಏನು ನಿಮ್ಮಪ್ಪಂದು ಅಲ್ಲ ಎಂದು ವಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದರು.
ಇಂದು ವಿಜಯಪುರದಲ್ಲಿ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಜಮೀರ್ ಅಹ್ಮದ್ ಕಿಡಿ ಕಾರಿದ್ದು, ವಕ್ಫ್ ಆಸ್ತಿಯಲ್ಲಿ ಒಂದಿಷ್ಟು ಸಹ ಸರ್ಕಾರದ ಆಸ್ತಿ ಇಲ್ಲ. ಇದು ದಾನಿಗಳು ದಾನ ನೀಡಿರುವ ಆಸ್ತಿ. ವಕ್ಫ್ ಆಸ್ತಿ ಬಸನಗೌಡ ಪಾಟೀಲ್ ಯತ್ನಾಳ್ ಅಪ್ಪನ ಆಸ್ತಿಯಲ್ಲ ಎಂದು ಕಿಡಿ ಕಾರಿದರು.
ವಕ್ಫ್ ಆಸ್ತಿ ನಿಮ್ಮಪ್ಪನ ಆಸ್ತಿಯು ಅಲ್ಲ ನಮ್ಮಪ್ಪನ ಆಸ್ತಿಯೂ ಅಲ್ಲ. ಸಮಾಜಕ್ಕೆ ಒಳ್ಳೆಯದಾಗಲೆಂದು ದಾನ ಮಾಡಿರುವ ಆಸ್ತಿ ಇದು. ಒಂದಿಂಚು ಸರ್ಕಾರದ ಜಮೀನು ತಗೊಂಡಿಲ್ಲ ಮಿಸ್ಟರ್ ಯತ್ನಾಳ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.