ಬೆಂಗಳೂರು : ಅಕ್ಟೋಬರ್ 10ರಂದು ನಿಗದಿಯಾಗಿದ್ದ ಸಂಪುಟ ಸಭೆ ರದ್ದಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಗುರುವಾರ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಅಕ್ಟೊಬರ್ 10 ರಂದು ನಡೆಯುವ ಸಂಪುಟ ಸಭೆ ರದ್ದಾಗಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಜಾತಿಗಣತಿ ವಿಚಾರಕ್ಕೆ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ಟೊಬರ್ 10 ರಂದು ಸಚಿವ ಸಂಪುಟ ಸಭೆ ಇಲ್ಲ. ಅಕ್ಟೋಬರ್ 18ರಂದು ಸಚಿವ ಸಂಪುಟ ಸಭೆಯ ನಡೆಸಲಾಗುವುದು. ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚಿಸುತ್ತೇವೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
2014ರಲ್ಲಿ ಕಾಂತರಾಜು ನೇತೃತ್ವದಲ್ಲಿ ಜಾತಿಗಣತಿ ವರದಿ ಜಾರಿಗೆ ಸಮೀಕ್ಷೆ ನಡೆಸಿದ್ದು, ಜಾತಿಗಣತಿ ವರದಿಯನ್ನು ನಾನು ಇನ್ನೂವರೆಗೂ ನೋಡಿಲ್ಲ. ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರದಿ ಸಲ್ಲಿಸಲು ಮುಂದಾಗಿದ್ದರು. ಆದರೆ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವರದಿ ಪಡೆಯಲು ಒಪ್ಪಲಿಲ್ಲ.
ಅಂದಿನ ಸಚಿವ ಪುಟ್ಟರಂಗಶೆಟ್ಟಿಗೆ ಹೇಳಿ ವರದಿ ಪಡೆಯುವುದು ಬೇಡ ಅಂದಿದ್ದರು. ವರದಿ ಜಾರಿಯ ಬಗ್ಗೆ ಅಕ್ಟೋಬರ್ 18 ರಂದು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುತ್ತೇವೆ. ಜಾತಿಗಣತಿ ವರದಿ ಜಾರಿಯ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.