ಬೀದರ್ : ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ರೈತನ ಜಮೀನಿನ ಮೇಲೆ ಪೊಲೀಸರು ದಾಳಿ ಮಾಡಿ ಸುಮಾರು ಮೂರು ಕೋಟಿಗೂ ಅಧಿಕ ಗಾಂಜಾ ಬೆಳೆಯನ್ನು ನಾಶಪಡಿಸಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.
ಹೌದು ಗಾಂಜಾ ಬೆಳೆದಿದ್ದ ರೈತನ ಜಮೀನಿನ ಮೇಲೆ ಪೊಲೀಸರ ದಾಳಿ ನಡೆಸಿದ್ದು, ಆರು ಅಡಿ ಉದ್ದದ ಸಾವಿರಕ್ಕೂ ಹೆಚ್ಚು ಗಾಂಜಾ ಹಸಿಗಳನ್ನು ರೈತ ಬೆಳೆದಿದ್ದ. ಬಸವಕಲ್ಯಾಣ ತಾಲೂಕಿನ ಉಜಾಳಂಬ ಗ್ರಾಮದ ಬಳಿ ಪೊಲೀಸರು ದಾಳಿ ಮಾಡಿದ್ದಾರೆ.ಬೀದರ್ ಎಸ್ ಪಿ ಪ್ರದೀಪ್ ಗುಂಟೆ ನೇತೃತ್ವದಲ್ಲಿ ಈ ಒಂದು ರೆಡ್ ನಡೆದಿದೆ.
ಅಂದಾಜು ಮೂರು ಕೋಟಿಗೂ ಹೆಚ್ಚು ಮೌಲ್ಯದ ಗಾಂಜಾ ಗಿಡಗಳನ್ನು ನಾಶ ಮಾಡಿದ್ದಾರೆ. ಮಹಾರಾಷ್ಟ್ರದ ಮೂಲದ ಬಸವರಾಜ್ ಎಂಬುವರು ಗಾಂಜಾ ಬೆಳೆದಿದ್ದರು. ಬಸವಕಲ್ಯಾಣ ತಾಲೂಕಿನ ಮಂಟಾಳ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.