ದಾವಣಗೆರೆ : ಸಿಎಂ ಸ್ಥಾನದ ಕುರಿತಾಗಿ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಇತ್ತೀಚಿಗೆ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಬಳಿಕ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ದಲಿತರಿಗೆ ಮುಸ್ಲಿಮರಿಗೆ ಒಕ್ಕಲಿಗರಿಗೆ ಲಿಂಗಾಯತರಿಗೆ ಎಲ್ಲರಿಗೂ ಸಿಎಂ ಆಗುವ ಆಸೆ ಇದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ದಲಿತರು, ಮುಸ್ಲಿಂ, ಒಕ್ಕಲಿಗರು ಸೇರಿ ಎಲ್ಲರಿಗೂ ಸಿಎಂ ಆಗುವ ಆಸೆ ಇದೆ. ಆದರೆ ಮುಂದಿನ 5 ವರ್ಷದ ಅವಧಿಯಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಹುದ್ದೆಯಿಂದ ಟಗರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದರು. ಸಿಎಂ ಕುರ್ಚಿಯಲ್ಲಿ ಟಗರು ಗಟ್ಟಿಯಾಗಿ ಕುಳಿತದೆ. ಸಿಎಂ ಕುರ್ಚಿಯಲ್ಲಿರುವ ಟಗರನ್ನು ಯಾರಿಂದಲೂ ಸಾಧ್ಯವಿಲ್ಲ ಎಂದು ದಾವಣಗೆರೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು.
ದೇಶದಲ್ಲಿ ಸಿದ್ದರಾಮಯ್ಯ ಅವರಷ್ಟು ಜನಪ್ರಿಯ ವ್ಯಕ್ತಿ ಯಾರು ಇಲ್ಲ. ರಾಜ್ಯದಲ್ಲೇ ಪ್ರಧಾನಿ ಮೋದಿಗಿಂತಲೂ ಸಿಎಂ ಸಿದ್ದರಾಮಯ್ಯ ಪ್ರಸಿದ್ಧರಾಗಿದ್ದಾರೆ. ಬೇಕಾದರೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಕಾರ್ಯಕ್ರಮ ನಡೆಸಿ. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಜನರು ಹೆಚ್ಚು ಸೇರುತ್ತಾರೆ. ಸಿದ್ದರಾಮಯ್ಯ ಸಲುವಾಗಿ ಸ್ವಯಂ ಪ್ರೇರಿತವಾಗಿ ರಣ ಸೇರುತ್ತಾರೆ ನಮ್ಮ ಟಗರು ಟಗರೆ ಎಂದು ಜಮೀರ್ ಅಹ್ಮದ್ ತಿಳಿಸಿದರು.
ರಾಹುಲ್ ಗಾಂಧಿಯವರು ಜಾತಿಗಣಿತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಸೋನಿಯಾ ಗಾಂಧಿ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದಾರೆ ಅಂದರೆ ಮುಗಿಯಿತು. ಎಲ್ಲ ಬಾಯಿ ಮುಚ್ಚಿಕೊಂಡು ಇರಬೇಕು. ಜಾತಿಗಣತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಲ್ಲ ಹಲವಾರು ವರ್ಷಗಳಿಂದ ಮಾತನಾಡುತ್ತಲೇ ಬಂದಿದ್ದಾರೆ. ಜಾತಿಗಣತಿಯ ಬಗ್ಗೆ ವರದಿ ಜಾರಿಗೆ ಬಗ್ಗೆ ರಾಹುಲ್ ಅವರೇ ಹೇಳಿದ್ದಾರೆ ಅದೇ ಅಂತಿಮ ಎಂದರು.