ರಾಯಚೂರು : ಕಳೆದ ಕೆಲವು ತಿಂಗಳ ಹಿಂದೆ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಇದೀಗ ರಾಯಚೂರು ಜಿಲ್ಲೆಯಲ್ಲಿ ಅಂತದೇ ಘಟನೆ ನಡೆದಿದ್ದು ಮರಕ್ಕೆ ಕಟ್ಟಿಹಾಕಿ ಮಹಿಳೆಯನ್ನು ಸ್ಥಳೀಯರು ಥಳಿಸಿರುವ ಘಟನೆ ರಾಯಚೂರಿನ ಮಕ್ತಲಪೇಟೆಯಲ್ಲಿ ನಡೆದಿದೆ.
ಹೌದು ರಾಯಚೂರಿನ ಮಕ್ತಲಪೇಟೆಯಲ್ಲಿ ಮರಕ್ಕೆ ಮಹಿಳೆಯನ್ನು ಕಟ್ಟಿ ಹಿಂಸೆ ನೀಡಲಾಗಿದೆ. ಮಕ್ಕಳನ್ನು ಮುಟ್ಟಿದ್ದಕ್ಕೆ ಆತಂಕದಿಂದ ಸ್ಥಳೀಯರು ಮಹಿಳೆಯನ್ನು ಕಟ್ಟಿಹಾಕಿದ್ದರು. ಮಹಿಳೆಗೆ ಹಿಂಸೆ ನೀಡಿ ಬಳಿಕ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿ ನೇತಾಜಿ ನಗರ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.ವಿಚಾರಣೆಯ ವೇಳೆ ಮಹಿಳೆ ಮಾನಸಿಕ ಅಸ್ವಸ್ಥಳು ಎಂಬ ಮಾಹಿತಿ ಸಿಕ್ಕಿದೆ. ಮಹಿಳೆಯನ್ನು ಹಗ್ಗದಿಂದ ಮರಕೆ ಕಟ್ಟಿ ಹಾಕಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ.ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಹಾಕಲಾಗಿದೆ.