ಕಲಬುರ್ಗಿ : ಮಹಾರಾಷ್ಟ್ರದಿಂದ ಆಂಧ್ರಪ್ರದೇಶದ ಕಡೆಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ರೈಲೋಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ 3 ಭೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಭೋಗಿಯಲ್ಲಿ ಡೀಸೆಲ್ ಇಲ್ಲದ ಕಾರಣ ಭಾರಿ ಅನಾಹುತ ಒಂದು ತಪ್ಪಿದೆ.
ಹೌದು ವಾಡಿ ಜಂಕ್ಷನ್ ನಲ್ಲಿ ಡೀಸೆಲ್ ಟ್ಯಾಂಕರ್ ರೈಲೋಂದು ಹಳಿ ತಪ್ಪಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ ಈ ಒಂದು ಘಟನೆ ನಡೆದಿದೆ. ಮಹಾರಾಷ್ಟ್ರದ ಪೆನವಲನಿಂದ ಈ ಒಂದು ಡೀಸೆಲ್ ಟ್ಯಾಂಕರ್ ರೈಲು ಹೊರಟಿತ್ತು. ಆಂಧ್ರಪ್ರದೇಶದ ಗುಂತಕಲ್ ಗೆ ತೆರಳುತ್ತಿದ್ದ ವೇಳೆ ಡೀಸೆಲ್ ಟ್ಯಾಂಕರ್ ರೈಲು ವಾಡಿ ರೈಲ್ವೆ ಜಂಕ್ಷನ್ ನಲ್ಲಿ ನಿಲ್ಲಿಸುವಾಗ ಹಳಿ ತಪ್ಪಿದೆ.
ಅದೃಷ್ಟವಶಾತ್ ಹಳಿ ತಪ್ಪಿದ ಟ್ಯಾಂಕರ್ ನಲ್ಲಿ ಡೀಸೆಲ್ ಇರಲಿಲ್ಲ. ಹಳಿ ತಪ್ಪಿದ ಮೂರು ಭೋಗಿಗಳನ್ನು ಇದೀಗ ರೈಲ್ವೆ ಅಧಿಕಾರಿಗಳು ಸರಿಪಡಿಸಿದ್ದಾರೆ. ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಘಟನೆ ಕುರಿತಂತೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.