ರಾಮನಗರ : ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಪಟ್ಟಂತೆ ಇದೀಗ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಇನ್ನೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಈ ನಡುವೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಯಾವುದೇ ಸಂದರ್ಭದಲ್ಲಿ ಚನ್ನಪಟ್ಟಣದ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು ಎಂದು ತಿಳಿಸಿದರು.
ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ ನಾನು ದೇವರಿಗೆ ಮಾತ್ರ ಹೆದರುತ್ತೇನೆ. ಶಿವನ ಆಶೀರ್ವಾದ ನಮಗೆ ಇರುವವರೆಗೂ ಯಾರೂ ಮುಗಿಸಲು ಆಗಲ್ಲ. ನನಗೆ 3 ಬಾರಿ ಆಪರೇಷನ್ ಆಗಿದೆ. ಒಳ್ಳೆಯ ಕೆಲಸ ಮಾಡಬೇಕು ಬಡವರಿಗೆ ಒಳ್ಳೆಯ ಕೆಲಸ ಮಾಡಲು ದೇವರು 3ನೆ ಜನ್ಮ ನೀಡಿದ್ದಾನೆ. ನಾನು ಯಾವನಿಗೂ ದಮ್ಮಯ್ಯ ಅಂತ ಹೇಳುವುದಿಲ್ಲ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು ಎಂದರು.
ಚನ್ನಪಟ್ಟಣಕ್ಕೆ ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸಬೇಕು. ನಾನು ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ. ಮೋದಿ ಸಂಪುಟದಲ್ಲಿ ಸೀನಿಯರ್ ಮಂತ್ರಿಯಾಗಿ 9ನೇ ಸ್ಥಾನದಲ್ಲಿ ಇದ್ದೇನೆ. ದೇಶವನ್ನು ದರೋಡೆ ಮಾಡುವವರ ನಡುವೆ ಇದ್ದೀರಿ. ಯೋಚಿಸಿ ತೀರ್ಮಾನಿಸಿ ಈಗ ಏನೋ ಮನೆ ಕಟುತತ್ತೇವೆ, ಸೈಟ್ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ.
ಅವರು ಕೊಡುವ ಅಷ್ಟರಲ್ಲಿ ಚುನಾವಣೆ ಘೋಷಣೆ ಆಗುತ್ತದೆ. ನಂತರ ಚುನಾವಣೆ ಮುಗಿದ ಮೇಲೆ ಟಾಟಾ ಮಾಡಿ ಹೋಗುತ್ತಾರೆ ಇದೆಲ್ಲ ಮಾಡೋದಾಗಿದ್ರೆ ಈ ಹಿಂದೆಯೇ ಮಾಡಬೇಕಾಗಿತ್ತು. ನನಗೆ ನಷ್ಟ ಆಗಲ್ಲ ಹೆಚ್ಚು ಕಡಿಮೆಯಾದರೆ ನಿಮಗೆ ನಷ್ಟ ಆಗಬಹುದು ಎಂದು ಡಿಕೆ ಬ್ರದರ್ಸ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.