ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮೂಲದ ಇಬ್ಬರು ಕಾರ್ಮಿಕರು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದರು. ಅದಾದ ಬಳಿಕ ಇಂದು ಕನ್ನಡ ಮಾತಾಡಿ ಅಂದಿದ್ದಕ್ಕೆ ವ್ಯಕ್ತಿ ಓರ್ವನ ಮೇಲೆ ಹಿಂದಿ ಭಾಷಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಹೌದು ದಾಬಸ್ ಪೇಟೆ ನಿವಾಸಿ ಸೈಯದ್ ರಫೀಕ್ (52) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಇಂದು ಅವರು, ಚಿಕ್ಕಪೇಟೆಯ ಮಮತಾ ಆರ್ಟ್ಸ್ ಸ್ಟೋರ್ ಗೆ ಭೇಟಿ ನೀಡಿದ್ದರು.ಈ ವೇಳೆ ಅಂಗಡಿಯ ಕೆಲಸದವನ ಬಳಿ ಮನೆಗೆ ಕಂಚಿನ ದೀಪದ ಕಂಬಬೇಕಾಗಿದೆ ಎಂದು ಕನ್ನಡದಲ್ಲಿ ಹೇಳಿದ್ದಾರೆ.ಆದರೆ ಕೆಲಸದಾತನಿಗೆ ಕನ್ನಡ ಅರ್ಥವಾಗಿಲ್ಲ. ಈ ವೇಳೆ ಅಂಗಡಿಯ ಮಾಲೀಕ ಮದ್ಯ ಪ್ರವೇಶಿಸಿ, ವ್ಯವಹರಿಸಿದ್ದಾರೆ.
ಆದರೆ ಕೆಲಸದವನು ರಫೀಕ್ ಅವರ ಪತ್ನಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಕೆಲಸಗಾರ ಸಿಬ್ಬಂದಿ ನೀನು ಬೇಕಾದರೆ ಶಾಲೆಗೆ ಹೋಗಿ ಕನ್ನಡ ಕಲಿ, ನಮ್ಮೊಂದಿಗೆ ಮಾತನಾಡಬೇಕಾದರೆ ನಮ್ಮ ಭಾಷೆಯಲ್ಲಿ ಮಾತನಾಡು ಎಂದು ಹೇಳಿದ್ದಾರೆ ಇದರಿಂದ ಸಿಟ್ಟಾದ ರಫೀಕ್ ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಇದೇ ವೇಳೆ ಅಂಗಡಿ ಸಿಬ್ಬಂದಿ ಹಿತ್ತಾಳೆ ಪಾತ್ರೆಯಿಂದ ರಫೀಕ್ ತಲೆಗೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ.
ಕೂಡಲೇ ರಫೀಕ್ ಸಾರ್ವಜನಿಕರಿಂದ ರಕ್ಷಣೆ ಕೋರಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಸ್ಥಳೀಯರು ರಫೀಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಂಗಡಿ ಸಿಬ್ಬಂದಿಗಳಾದ ಶೇಷ್ ಕುಮಾರ್ ಹಾಗೂ ಅರವಿಂದ್ ನನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ BNS ಸೆಕ್ಷನ್ 118 ಮತ್ತು 352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.