ಚಿಕ್ಕಮಗಳೂರು : ಕೆರೆ ಒತ್ತುವರಿ ತೆರವಿಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ವೇಳೆ ರೈತನೊಬ್ಬ ತನ್ನ ಜಮೀನು ಕೂಡ ಅಧಿಕಾರಿಗಳು ತೆರವು ಮಾಡುತ್ತಾರೆ ಎಂದು ಆತಂಕಕ್ಕೆ ಒಳಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಂಗಳೂರು ತಾಲೂಕಿನ ಕೆ.ಆರ್.ಪೇಟೆ ಸಮೀಪದ ಕೆಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮಲ್ಲೇಶ್ (38) ಎಂದು ತಿಳಿದುಬಂದಿದೆ.ಮೃತ ಮಲ್ಲೇಶ್ ಗ್ರಾಮದ ಕೆರೆ ಪಕ್ಕ 14 ಗುಂಟೆ ಒತ್ತುವರಿ ಮಾಡಿದ್ದರು. ಮಲ್ಲೇಶ್ ತನ್ನ ಸಕ್ರಮ ಜಮೀನಿನ ಜೊತೆ ಒತ್ತುವರಿ ಮಾಡಿ ಕಾಫಿ-ಮೆಣಸು ಬೆಳೆದಿದ್ದರು. ಹಾಗಾಗಿ ಕೆಲವು ದಿನಗಳ ಹಿಂದೆ ಕೆರೆ ಒತ್ತುವರಿ ತೆರವುಗೊಳಿಸಲು ಸರ್ವೇ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ವರದಿಯನ್ನು ತಯಾರು ಮಾಡಿ ನೋಟೀಸ್ ನೀಡಿದ್ದರು.
ಮೃತ ಮಲ್ಲೇಶ್ ತನ್ನ ಸಕ್ರಮ ಜಮೀನಿನ ಜೊತೆ ಒತ್ತುವರಿ ಮಾಡಿ ಕಾಫಿ-ಮೆಣಸು ಬೆಳೆದಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ನೋಟೀಸ್ ನೀಡುತ್ತಿದ್ದಂತೆ ಭಯಗೊಂಡು ಕಾಫಿಗೆ ಸಿಂಪಡಿಸಲು ತಂದಿದ್ದ ಕಳೆನಾಶಕವನ್ನೇ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಮಲ್ಲೇಶ್ ಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಚಿಕ್ಕಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.