ಗದಗ : ಜಾತಿಗಣತಿ ಹಾಗೂ ಒಳ ಮೀಸಲಾತಿ ವಿಚಾರಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಆದರೆ ಜಾತಿಗಣತಿ ಪ್ರಾಮಾಣಿಕವಾಗಿ, ಪಾರದರ್ಶಕವಾಗಿರಬೇಕು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಗದಗದಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಜಾತಿಗಣತಿ ಮಾಡಲು ನಮ್ಮದು ಸಂಪೂರ್ಣ ಸಹಕಾರವಿದೆ. ಅವೈಜ್ಞಾನಿಕವಾಗಿರುವ, ದುರುದ್ದೇಶ ಕೂಡಿರುವ, ಸಮುದಾಯಗಳಿಗೆ ನೋವುಂಟು ಮಾಡುವ ಯಾವುದೇ ಜಾತಿಗಣತಿಯನ್ನು ಪಂಚಮಸಾಲಿ ಒಪ್ಪೊದಿಲ್ಲ. ಜಾತಿಗಣತಿ ಯಾವುದೇ ಸಮುದಾಯ ಟಾರ್ಗೆಟ್ ಮಾಡದ ರೀತಿಯಲ್ಲಿ ಇರಬಾರದು. ಎಲ್ಲಾ ಸಮುದಾಯದ ನಿಖರವಾದ ಮಾಹಿತಿ ಪಡೆದುಕೊಂಡಿರಬೇಕು ಎಂದರು. ಕಾನೂನಾತ್ಮಕವಾಗಿ ದತ್ತಾಂಶ ಕ್ರೂಢಿಕರಣ ಇರಬೇಕು.
ಇನ್ನು ಒಳ ಮೀಸಲಾತಿ ಎಸ್.ಸಿ, ಎಸ್.ಟಿ ಗೆ ಸಂಬಂಧಿಸಿದ್ದು. ಪಂಚಮಸಾಲಿ ನಾವು 3-ಬಿ ನಲ್ಲಿದ್ದೇವೆ. ನಮ್ಮ ಸಮುದಾಯಲ್ಲಿರುವ ಜನಸಂಖ್ಯೆಗೆಯೇ ಮೀಸಲಾತಿ ಸಾಕಾಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಮೆರಿಟ್ ಮೇಲೆ ಸಹ ನ್ಯಾಯ ಸಿಗುತ್ತಿಲ್ಲ. ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ಬೇಕು ಎಂದು ಕೇಳುತ್ತಿದ್ದೇವೆ. ಜಾತಿಗಣತಿ ವಿಚಾರದಲ್ಲಿ ಅನೇಕ ಕಡೆಗಳಲ್ಲಿ ಅಪಸ್ವರ ಎದ್ದಿದೆ. ಪ್ರಬಲ ಸಮುದಾಯಗಳ ಸಂಖ್ಯೆ ಕಡಿಮೆ ಇದೆ ಎಂಬ ಆರೋಪವಿದೆ. ಮತ್ತೊಮ್ಮೆ ಜಾತಿಗಣತಿ ಮಾಡಿ ಎಂದು ಅನೇಕ ಶಾಸಕರು ಸಿಎಂಗೆ ಮನವಿ ಕೊಟ್ಟಿದ್ದಾರೆ.
ಅ. 15 ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ವಕೀಲರ ಸಭೆಗೆ ತೀರ್ಮಾನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಭೆಗೆ ತೀರ್ಮಾನ ಮಾಡಿದ್ದು ಆಶಾದಾಯಕವಾಗಿದೆ. ಸಭೆ ಯಶಸ್ವಿ ಆಗಬೇಕು. ಆ ನಿಟ್ಟಿನಲ್ಲಿ ಸಂಬಂಧ ಪಟ್ಟ ಕಾನೂನು ಸಚಿವ ಎಚ್.ಕೆ. ಪಾಟೀಲರು ಹಿಂದುಳಿದ ವರ್ಗಗಳ ಆಯೋಗ ಪೂರಕ ದಾಖಲೆ ಕೊಡಬೇಕು. ಸಭೆಯಲ್ಲಿ ಸಿಎಂ ಪಂಚಮಸಾಲಿ ಸಮಾಜದ ನ್ಯಾಯಯುತ ಹೋರಾಟಕ್ಕೆ ಸ್ಪಷ್ಟವಾದ ಸಂದೇಶ ಕೊಡಬೇಕು. ಸಿಎಂ ನಿಗಧಿ ಮಾಡಿರುವ ದಿನ ಮುಂದೂಡಬಾರದು ಎಂದು ತಿಳಿಸಿದ್ದಾರೆ.