ಬೆಂಗಳೂರು: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಡೆಸಿತು. ದರ್ಶನ್ ಪರ ವಕೀಲರ ವಾದವನ್ನು ಆಲಿಸಿದಂತ ನ್ಯಾಯಾಲಯವು ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್.8ಕ್ಕೆ ಮುಂದೂಡಿದೆ. ಹೀಗಾಗಿ ನಟ ದರ್ಶನ್ ಗೆ ಇಂದು ಕೂಡ ರಿಲೀಫ್ ಸಿಕ್ಕಿಲ್ಲ. ಜೈಲೇ ಗತಿ ಎನ್ನುವಂತೆ ಆಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವಂತ ಅವರು ತಮ್ಮ ಪರ ವಕೀಲರ ಮೂಲಕ ಪ್ರಕರಣದಲ್ಲಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಸಿತು.
ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ವಾದ ಮಾಡಿಸುತ್ತಾ, ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಭಾಗಿಯಾಗಿರುವ ಬಗ್ಗೆ ಸಿಸಿಟಿವಿಯ ಯಾವುದೇ ದೃಶ್ಯಗಳಿಲ್ಲ. ಕೇವಲ ನಟ ಅವರ ಮನೆಗೆ ತೆರಳುತ್ತಿರುವಂತ ಒಂದೇ ಒಂದು ದೃಶ್ಯ ಮಾತ್ರವೇ ಇರೋದು. ನಟ ಚಿಕ್ಕಣ್ಣ ಜೊತೆಗೆ ಮುಂದಿನ ಸಿನಿಮಾ ಕುರಿತಂತೆ ಚರ್ಚಿಸಿದ್ದಾರೆ ಎಂದರು.
ಶೆಡ್ ವಾಚ್ ಮನ್ ಹೇಳಿಕೆ ಪ್ರಮುಖ ಸಾಕ್ಷ್ಯಿಯಾಗಿ ದಾಖಲಿಸಲಾಗಿದೆ. ಆದರೇ ಅವರ ಹೇಳಿಕೆಯನ್ನು ದಾಖಲಿಸಲು ತಡ ಮಾಡಲಾಗಿದೆ. ಐದು ದಿನಗಳ ನಂತ್ರ ಪ್ತರತ್ಯ ದರ್ಶಿ ಹೇಳಿಕೆ ದಾಖಲಿಸಲಾಗಿದೆ. ಘಟನೆ ದಿನ ಜೂ.8ರಂದು ಬಂದು, ಜೂನ್.9ರಂದು ಸ್ಥಳದಲ್ಲಿದ್ದರೂ ಜೂನ್.15 ಆದರೂ ವಾಚ್ ಮನ್ ಸಾಕ್ಷಿಯನ್ನು ಏಕೆ ದಾಖಲಿಸಲಿಲ್ಲ? ಎಂದು ವಾದಿಸಿದರು.
ರಿಮಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಮಾಹಿತಿ ನೀಡಬೇಕು. ಯಾವ ದಾಖಲೆ ಸಂಗ್ರಹಿಸಿದ್ದಾರೆಂಬ ಮಾಹಿತಿ ನೀಡಬೇಕು. ಎಲ್ಲೆಲ್ಲಿ ತನಿಖೆ ನಡೆಸಿದ್ದಾರೆ ಮಾಹಿತಿ ನೀಡಬೇಕು. ಕೇಸ್ ಡೈರಿಯಲ್ಲಿ 161 ಸಾಕ್ಷಿಗಳ ಹೇಳಿಕೆಯನ್ನೂ ದಾಖಲಿಸಬೇಕು. ರಿಮ್ಯಾಂಡ್ ಅರ್ಜಿಯಲ್ಲಿ 69, 77, 78, 79 ಸಾಕ್ಷಿಗಳ ಹೇಳಿಕೆಯಿಲ್ಲ. ಯಾವುದೇ ಸಾಕ್ಷಿಯ ಹೆಸರನ್ನು ನಮೂದು ಮಾಡಿಲ್ಲ.
ರಕ್ತದ ಕಲೆ ಇರುವ ಎರಡು ಕೋಲು ವಶಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಪಂಚನಾಮೆಯ ವೇಳೆಯಲ್ಲಿ ರಕ್ತದ ಕಲೆ ಇದೆ. ಆದರೇ ಎಫ್ಎಸ್ಎಲ್ ವರದಿಯಲ್ಲಿ ರಕ್ತದ ಕಲೆಯೇ ಇಲ್ಲ ಎಂಬುದಾಗಿ ಹೇಳಿದೆ. ಚಾರ್ಜ್ ಶೀಟ್ ನಲ್ಲಿರೋ ಅಂಶಗಳು ಡ್ರಾಮಾ. ಊಟಕ್ಕೆ ಬರುವುದು, ಸಿನಿಮಾ ಬಗ್ಗೆ ಜೊತೆಯಾಗಿ ಸೇರಿ ಮಾತನಾಡುವುದು ಕೊಲೆ ಸಂಚು ಆಗುತ್ತಾ? ಎಂಬುದಾಗಿ ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದಿಸಿದರು.
ಶೂನಲ್ಲಿ ರಕ್ತ ವಿತ್ತು ಅಂತಾರೆ. ಯಾವ ಶೂ ಅಂತ ಹೇಳಿಲ್ಲ. ಎಫ್ಎಸ್ಎಲ್ ವರದಿಯಲ್ಲಿ ರಕ್ತದ ಮಾದರಿಯೇ ಇಲ್ಲ ಎಂಬುದಾಗಿದೆ. ಎಫ್ಎಸ್ಎಲ್ ವರದಿಯಲ್ಲಿ ಇಲ್ಲದ ರಕ್ತ, ಚಾರ್ಜ್ ಶೀಟ್ ನಲ್ಲಿ ಹೇಗೆ ಬಂತು.? ಪೊಲೀಸರಿಗೆ ಲಾ ಪಾಯಿಂಟ್ ಹಾಕಿದರು.
ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯವು ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದವನ್ನು ಆಲಿಸಿದ ಬಳಿಕ, ಮತ್ತಷ್ಟು ವಿಚಾರಣೆಗಾಗಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್.8ಕ್ಕೆ ಮುಂದೂಡಿಕೆ ಮಾಡಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್
ಶಿವಮೊಗ್ಗ ಜನತೆ ಗಮನಕ್ಕೆ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut