ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಇಂದು ಮೂವರು ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು, ಅಕ್ಟೋಬರ್.8ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿದೆ.
ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳಾದಂತ ಎ.3 ಪವನ್, ಎ4 ರಾಘವೇಂದ್ರ ಹಾಗೂ ಎ7 ಅನುಕುಮಾರ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ನಡೆಸಿತು.
ಈ ವೇಳೆ ಎ.7 ಆರೋಪಿ ಅನುಕುಮಾರ್ ಪರ ವಾದಿಸಿದಂತ ವಕೀಲ ರಾಮ್ ಸಿಂಗ್ ಅವರು, ರೇಣುಕಾಸ್ವಾಮಿ ಕೊಲೆಗೆ ತಮ್ಮ ಕಕ್ಷಿದಾರ ಕಾರಣನಲ್ಲ. ಇತರೆ ಆರೋಪಿಗಳೊಂದಿಗೆ ಸಂಪರ್ಕದಲ್ಲಿ ಇದ್ದ ಮಾತ್ರಕ್ಕೆ ಆರೋಪಿಯಾಗಿ ಮಾಡಲಾಗಿದೆ. ಕಾಲ್ ರೆಕಾರ್ಡಿಂಗ್ ನಲ್ಲಿ ಕೊಲೆಗೆ ಪೂರಕ ಸಾಕ್ಷ್ಯಗಳಲಿಲ್ಲ. ಬಲವಂತವಾಗಿ ಕಿಡ್ನಾಪ್ ಮಾಡಿದ ಬಗ್ಗೆ ಹಾಗೂ ಕೊಲೆ ಸಂಚಿನ ಬಗ್ಗೆಯೂ ಸಾಕ್ಷಿಯಿಲ್ಲ ಎಂದು ವಾದಿಸಿದರು.
ರೇಣುಕಾಸ್ವಾಮಿ ಜೊತೆಯಲ್ಲೇ ಡಾಬಾದಲ್ಲಿ ಊಟ ಮಾಡಿದ್ದಾರೆ. ಕೊಲೆಯಲ್ಲಿ ಅನುಕುಮಾರ್ ಪಾತ್ರವಿಲ್ಲ. ಎ.7 ಅನುಕುಮಾರ್ ರೇಣುಕಾಸ್ವಾಮಿ ಕೊಲೆಗೆ ಕಾರಣನಲ್ಲ. ಪ್ರಕರಣದಲ್ಲಿ ಅನುಕುಮಾರ್ ಅವರನ್ನು ಬಲಿಪಶು ಮಾಡಲಾಗಿದೆ ಎಂಬುದಾಗಿ ವಾದಿಸಿ, ಜಾಮೀನು ಕೋರಿದರು.
ಅನುಕುಮಾರ್ ಅಲ್ಲದೇ ಆರೋಪಿಗಳಾದಂತ ಪವನ್, ರಾಘವೇಂದ್ರ ಸಲ್ಲಿಸಿದ್ದಂತ ಜಾಮೀನು ಅರ್ಜಿ ಕೂಡ ನಡೆಸಿ, ಕೋರ್ಟ್ ಎಸ್ ಪಿಪಿ ಪ್ರಸನ್ನ ಕುಮಾರ್ ಅವರಿಗೆ ಆಕ್ಷೇಪಣೆ ಸಲ್ಲಿಸಿದ್ದಕ್ಕಾಗಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್.8ಕ್ಕೆ ಮುಂದೂಡಿಕೆ ಮಾಡಿದೆ.
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್