ಮಂಡ್ಯ : ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ, ದಸರಾ ಆನೆಗಳು ಆಗಮಿಸಿವೆ. ಮಹೇಂದ್ರ ದಸರಾ ಅಂಬಾರಿಯನ್ನು ಹೊರಲಿದ್ದಾನೆ. ಈ ವೇಳೆ ಲಕ್ಷ್ಮಿ ಆನೆಯು ಕುದುರೆ ನೋಡಿ ಬೆಚ್ಚಿ ಬಿದ್ದಿದೆ. ಕೂಡಲೇ ಜನರು ದಿಕ್ಕಾಪಾಲಾಗಿ ಓಡಿದ್ದು ಭಾರಿ ಅನಾಹುತ ಒಂದು ತಪ್ಪಿದೆ.
ಹೌದು ಇಂದು ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಇರಲಿದ್ದು, ಕಳೆದ ವರ್ಷದಂತೆ ಈ ವರ್ಷವೂ ಮಹೇಂದ್ರ 400 ಕೆಜಿ ತೂಕದ ಮರದ ಅಂಬಾರಿ ಸೇರಿ ಒಟ್ಟು 650 ಕೆಜಿ ತೂಕದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯನ್ನು ಸಾಗಲಿದೆ.
ಈ ಒಂದು ಜಂಬೂಸವಾರಿಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿದ್ದು, ಮಹೇಂದ್ರ ಹಿರಣ್ಯ ಮತ್ತು ಲಕ್ಷ್ಮಿ ಹೆಸರಿನ ಆನೆಗಳು, ನಿನ್ನೆ ಸಂಜೆನೆ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿವೆ.ಇಂದು ಲಕ್ಷ್ಮಿ ಆಣೆಯು, ಶ್ರೀರಂಗಪಟ್ಟಣ ರಂಗನಾಥ ಮೈದಾನದ ಬಳಿ ಬನ್ನಿಮಂಟಪದ ಬಳಿ ನಿಂತಿರುವ ಕುದುರೆಯನ್ನು ನೋಡಿ ಲಕ್ಷ್ಮಿ ಆನೆ ಕೆಲ ಕಾಲ ರಂಪಾಟ ನಡೆಸಿತ್ತು. ಅದರಿಂದ ಜನರು ಸಹಜವಾಗಿ ಭಯ ಬೀತರಾಗಿದ್ದರು. ಕೂಡಲೇ ಮಾವುತ ಮತ್ತು ಕಾವಾಡಿ ಲಕ್ಷ್ಮಿ ಆನೆಯನ್ನು ನಿಯಂತ್ರಿಸಿದರು.