ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಡಿಎನ್ ಎ ಪರೀಕ್ಷೆ ಮಾಡಿಸಲು ನ್ಯಾಯಾಧೀಶರ ಅನುಮತಿ ಕೇಳಲು ಎಸ್‌ಐಟಿ ಅಧಿಕಾರಿಗಳು ಬಂದಿದ್ದರು. ಈ ವೇಳೆ ನ್ಯಾಯಲಯ ಡಿಎನ್ ಎ ಪರೀಕ್ಷೆ ನಡೆಸಲು ಅನುಮತಿ ನೀಡಿತು. ನ್ಯಾಯಾಧೀಶರ ಸಮ್ಮುಖದಲ್ಲಿಯೇ ಮುನಿರತ್ನ ರಕ್ತದ ಮಾದರಿ ಸಂಗ್ರಹ ಮಾಡಲು ಮುಂದಾದರು.
ಹೌದು ಎಸ್ ಐಟಿ ಅಧಿಕಾರಿಗಳು ವೈದ್ಯರೊಂದಿಗೆ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಮುನಿರತ್ನವ ಅವರು, ತಮ್ಮ ವಕೀಲರು ಬರಬೇಕು, ಅವರ ಮುಂದೆಯೇ ಸ್ಯಾಂಪಲ್ಸ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮನವಿಯನ್ನ ಪುರಸ್ಕರಿಸಿ, ವಕೀಲರು ಬಂದ ಮೇಲೆ ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್‌ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಳಿಕ ಶಾಸಕ ಮುನಿರತ್ನ ಅವರ ವಕೀಲರು ಕೋರ್ಟಿಗೆ ಆಗಮಿಸಿದ್ದಾರೆ.ಈ ವೇಳೆ ನ್ಯಾಯಾಧೀಶರು ಮುನಿರತ್ನ ಅವರ ರಕ್ತದ ಮಾದರಿ ಸಂಗ್ರಹಿಸಲು ಸೂಚನೆ ನೀಡಿದ್ದಾರೆ. ಹಾಗಾಗಿ ನ್ಯಾಯಾಧೀಶರ ಮುಂದೆ ಶಾಸಕ ಮುನಿರತ್ನ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.