ಬೆಂಗಳೂರು : ಉದ್ಯಮಿ ವಿಜಯ್ ತಾತ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿನ್ನೆ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ HDK ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದೀಗ ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ರೋಲ್ಕಾಲ್ ಸ್ವಾಮಿಯವರ ವಿರುದ್ಧ FIR ದಾಖಲಾಗಿದೆ ಎಂದು ತಿರುಗೇಟು ನೀಡಿದೆ.
ಸಾಮಾಜಿಕ ಜಾಲತಾಣ X ನಲ್ಲಿ ಮಾನ್ಯ ರೋಲ್ಕಾಲ್ ಸ್ವಾಮಿಯವರ ವಿರುದ್ಧ ₹ 50 ಕೋಟಿ ರೂಪಾಯಿ ವಸೂಲಿಗಾಗಿ ಜೀವ ಬೆದರಿಕೆ ಹಾಕಿದ್ದಕ್ಕೆ FIR ದಾಖಲಾಗಿದೆ. ದೂರು ನೀಡಿದ್ದು ಸ್ವತಃ ಜೆಡಿಎಸ್ ಪಕ್ಷದ ಪದಾಧಿಕಾರಿ.
ಹಿಂದೆ ಕುಮಾರಸ್ವಾಮಿಯವರ ಮಾನಸಪುತ್ರ ಪ್ರಜ್ವಲ್ ರೇವಣ್ಣನೇ ಜೆಡಿಎಸ್ ನಲ್ಲಿನ ಸೂಟ್ಕೇಸ್ ಸಂಸ್ಕೃತಿಯನ್ನು ತೆರೆದಿಟ್ಟಿದ್ದರು,
@hd_kumaraswamy ಅವರೇ, ನಿಮ್ಮನ್ನು ರೋಲ್ಕಾಲ್ ಸ್ವಾಮಿ ಎನ್ನೋಣವೇ, ಸೂಟ್ಕೇಸ್ ಸ್ವಾಮಿ ಎನ್ನೋಣವೇ?
ರಾಜಕಾರಣವನ್ನು ಮಾಫಿಯಾಕರಣ ಮಾಡಿದ ರೋಲ್ಕಲ್ ಸ್ವಾಮಿಯವರು ರಾಜ್ಯವನ್ನು ಲೂಟಿ ಹೊಡೆದಿದ್ದಷ್ಟೇ ಅಲ್ಲ, ರಾಜ್ಯದ ಭೂಮಿ ಕಬಳಿಸಿದ್ದಷ್ಟೇ ಅಲ್ಲ, ಸ್ವಪಕ್ಷದ ಕಾರ್ಯಕರ್ತರ ಲೂಟಿಗೂ ಇಳಿದಿರುವುದು ಶೋಚನೀಯ ಎಂದು ಕಾಂಗ್ರೆಸ್ HD ಕುಮಾರಸ್ವಾಮಿಗೆ ತಿರುಗೇಟು ನೀಡಿದೆ.
ಮಾನ್ಯ ರೋಲ್ಕಾಲ್ ಸ್ವಾಮಿಯವರ ವಿರುದ್ಧ ₹50 ಕೋಟಿ ರೂಪಾಯಿ ವಸೂಲಿಗಾಗಿ ಜೀವ ಬೆದರಿಕೆ ಹಾಕಿದ್ದಕ್ಕೆ FIR ದಾಖಲಾಗಿದೆ.
ದೂರು ನೀಡಿದ್ದು ಸ್ವತಃ ಜೆಡಿಎಸ್ ಪಕ್ಷದ ಪದಾಧಿಕಾರಿ.ಹಿಂದೆ ಕುಮಾರಸ್ವಾಮಿಯವರ ಮಾನಸಪುತ್ರ ಪ್ರಜ್ವಲ್ ರೇವಣ್ಣನೇ ಜೆಡಿಎಸ್ ನಲ್ಲಿನ ಸೂಟ್ಕೇಸ್ ಸಂಸ್ಕೃತಿಯನ್ನು ತೆರೆದಿಟ್ಟಿದ್ದರು,@hd_kumaraswamy ಅವರೇ,…
— Karnataka Congress (@INCKarnataka) October 4, 2024