ಮಂಡ್ಯ : ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಶ್ರೀರಂಗಪಟ್ಟಣಕ್ಕೆ ದಸರಾ ಆನೆಗಳು ಆಗಮಿಸಿವೆ. ಈ ಬಾರಿಯ ಶ್ರೀರಂಗಪಟ್ಟಣ ದಸರಾದ ಅಂಬಾರಿಯನ್ನು ಮಹೇಂದ್ರ ಆನೆ ಹೊರಲಿದ್ದಾನೆ. ಮಹೇಂದ್ರ ಆನೆಗೆ ಲಕ್ಷ್ಮಿ ಮತ್ತು ಹಿರಣ್ಯ ಆನೆಗಳು ಸಾಥ್ ನೀಡಲಿವೆ ಎಂದು ತಿಳಿದುಬಂದಿದೆ.
ಹೌದು ಇಂದು ಶ್ರೀರಂಗಪಟ್ಟಣ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ. ಕಳೆದ ವರ್ಷದಂತೆ ಈ ವರ್ಷವೂ ಮಹೇಂದ್ರ ಆನೆಯು 400 ಕೆ.ಜಿ. ತೂಕದ ಮರದ ಅಂಬಾರಿ ಸೇರಿ ಒಟ್ಟು 650 ಕೆ.ಜಿ. ತೂಕದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದೆ.
ಈ ಬಾರಿ ಪಟ್ಟಣದಲ್ಲಿ ಮಧ್ಯಾಹ್ನ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ಹಾಗಾಗಿ ಮಹೇಂದ್ರ, ಹಿರಣ್ಯ ಮತ್ತು ಲಕ್ಷ್ಮಿ ಹೆಸರಿನ ಆನೆಗಳು ನಿನ್ನೆ ಸಂಜೆನೇ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿವೆ.