ವಿಜಯಪುರ : ನಿನ್ನೆ ವಿಜಯಪುರ ನಗರದ ಗಣಪತಿ ಚೌಕ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಾಂಧಿಚೌಕ ಪೊಲೀಸರು ಕೇವಲ 10 ಗಂಟೆಯಲ್ಲೇ ಪ್ರಕರಣವನ್ನ ಭೇದಿಸಿದ್ದಾರೆ. ಈ ಸಂಬಂಧ ಸೊಹೇಲ್ ಜಮಾದಾರ್ (21) ಎಂಬಾತನನ್ನ ಬಂಧಿಸಿದ್ದಾರೆ.
ಹೌದು ನಿನ್ನೆ ನಗರದ ಗಣಪತಿ ಚೌಕ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ಎಸೆದು ಕೋಮು ಗಲಭೆ ಸೃಷ್ಟಿಸಲು ಯೋಜನೆ ಮಾಡಿದ್ದರು.ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಗಣಪತಿ ಚೌಕ್ ಮೇಲೆ ಆರೋಪಿ ಸೊಹೇಲ್ ಜಮಾದಾರ್ ಕಲ್ಲು ಎಸೆದಿದ್ದ. ಕುಡಿದ ನಶೆಯಲ್ಲಿದ್ದ ಖದೀಮರು ಕಲ್ಲು ತೂರಿ, ಸ್ಥಳದಲ್ಲಿದ್ದ ಹೋಮ್‌ಗಾರ್ಡ್‌ಗೆ ಅವಾಚ್ಯವಾಗಿ ನಿಂದಿಸಿದ್ದರು.
ಘಟನೆ ನಡೆದ ಬೆನ್ನಲ್ಲೇ ಎಸ್ಪಿ ಹೃಷಿಕೇಶ್ ಸೋನಾವಣೆ ಅವರು ಸಿಪಿಐ ತಳಕೇರಿ ನೇತೃತ್ವದಲ್ಲಿ ತಂಡವೊಂದನ್ನ ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಕೃತ್ಯದ ವೇಳೆ ಬಳಸಿದ್ದ ಆಟೋ ನಂಬರ್ ಮೂಲಕ ಆರೋಪಿಯನ್ನ ಪತ್ತೆ ಮಾಡಿದ್ದಾರೆ.ಗಾಂಧಿ ಚೌಕ ಸಿಪಿಐ ಪ್ರದೀಪ ತಳಕೇರಿ ಹಾಗೂ ತಂಡ ಸೊಹೇಲ್ ನನ್ನ ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಸೊಹೇಲ್ ಸ್ನೇಹಿತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಪೊಲೀಸುರ ಬಲೆ ಬೀಸಿದ್ದಾರೆ.