ಮೈಸೂರು : ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಅವರು ರಾಜ್ಯದ ಎಲ್ಲಾ ಜನತೆಗೆ ಒಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ.
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು. ಈ ವರ್ಷ ಅಕ್ಟೋಬರ್ ಮೂರರಿಂದ ಅಕ್ಟೋಬರ್ 12ರವರೆಗೆ ಮೈಸೂರು ದಸರಾ ಹಬ್ಬಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾಗಿ ಸ್ವಾಗತ ಕೋರಲು ಹರ್ಷಿಸುತ್ತೇನೆ.
ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದಸರಾ ಹಬ್ಬ, ದುಷ್ಟ ಶಕ್ತಿಗಳ ವಿರುದ್ಧ ವಿಜಯ ಸಾಧಿಸಿದ ವಿಜಯದ ಸಂಕೇತವು ಹೌದು. ಸಾಂಪ್ರದಾಯಿಕವಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕಲೆ ಸಾಹಿತ್ಯ ಸಂಗೀತ ಕ್ರೀಡಾಕ್ಷೇತ್ರ ಗಳಲ್ಲಿನ ಸಾಧನೆಗಳ ವಿಜಯೋತ್ಸವವಾಗಿಯೂ ನಾಡಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ.ಕಳೆದ ಬಾರಿ ಅನಿವಾರ್ಯವಾಗಿ ದಸರಾ ಹಬ್ಬದ ಸಾಂಪ್ರದಾಯಕ್ಕೆ ಒಂದಿಷ್ಟು ಚ್ಯುತಿ ಬಾರದಂತೆ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಿದ್ದೆವು.
ಈ ಬಾರಿ ನಾಡಿನ ಅಧಿದೇವತೆಯಾದ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಪ್ರಕೃತಿ ಒಲಿದು ನಮ್ಮೆಲ್ಲರನ್ನು ಹರಸಿದೆ. ಇಳೆಯ ತುಂಬಾ ಮಳೆಯಾಗಿ ಆಣೆಕಟ್ಟೆಲ್ಲ ತುಂಬಿ ನಾಡಿನದ್ಯಂತ ವರ್ಷದ ಹೊನಲು ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಹಬ್ಬವನ್ನು ಸಂಪ್ರದಾಯಗಳನ್ನು ಮೇಳಯಿಸಿಕೊಂಡು, ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ತುಂಬಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.
ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಆರಂಭಗೊಂಡಿದೆ. ನಾಡಿನ ಭವ್ಯ ಪರಂಪರೆ, ಕಲೆ, ಸಾಹಿತ್ಯದ ಸೊಬಗನ್ನು ಅನಾವರಣಗೊಳಿಸುವ ಈ ಉತ್ಸವದಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದನ್ನು ಜನೋತ್ಸವವಾಗಿಸಬೇಕು ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ಇದು ನಿಮ್ಮ ಉತ್ಸವ, ಕರುನಾಡಿನ ಉತ್ಸವ.ನಾವು, ನೀವೆಲ್ಲರೂ ಜೊತೆಗೂಡಿ ಈ ಉತ್ಸವವನ್ನುಸಂಭ್ರಮಿಸೋಣ ಎಂದು ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಅಹ್ವಾನಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಇಂದಿನಿಂದ ಆರಂಭಗೊಂಡಿದೆ. ನಾಡಿನ ಭವ್ಯ ಪರಂಪರೆ, ಕಲೆ, ಸಾಹಿತ್ಯದ ಸೊಬಗನ್ನು ಅನಾವರಣಗೊಳಿಸುವ ಈ ಉತ್ಸವದಲ್ಲಿ ತಾವೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದನ್ನು ಜನೋತ್ಸವವಾಗಿಸಬೇಕು ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ.
ಇದು ನಿಮ್ಮ ಉತ್ಸವ, ಕರುನಾಡಿನ ಉತ್ಸವ.
ನಾವು – ನೀವೆಲ್ಲರೂ… pic.twitter.com/w1JVb5c8fv— Siddaramaiah (@siddaramaiah) October 3, 2024