ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಇಡಿ ಸಂಕಷ್ಟ ಎದುರಾಗಿದೆ. ಇದರ ಮಧ್ಯ ಅವರ ಪತ್ನಿ ಪಾರ್ವತಿಯವರು, ಮುಡಾಗೆ 14 ಸೈಟ್ ಗಳನ್ನು ವಾಪಸ್ ನೀಡಿದ್ದಾರೆ. ಆದರೆ ವಿಪಕ್ಷಗಳು ಎಷ್ಟೇ ಒತ್ತಾಯ ಮಾಡಿದರು, ನಾನು ರಾಜೀನಾಮೆ ನೀಡಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಈ ವಿಚಾರವಾಗಿ, ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಅವರು ಸಿಎಂ ಸಿದ್ದರಾಮಯ್ಯ ನಾನೇ ಜಡ್ಜ್ ಎನ್ನುವ ಮನಸ್ಥಿತಿಯಿಂದ ಹೊರಬರಲಿ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಆರ್ ಅಶೋಕ್ ಅವರ 11 ವರ್ಷಗಳ ಹಳೆಯ ಪ್ರಕರಣವನ್ನು ಎತ್ತಿದ್ದಾರೆ. ಇವರಿಗೆ ಸಿದ್ದರಾಮಯ್ಯ ರಾಜೀನಾಮೆ ಕೇಳುವ ತಾಕತ್ ಇಲ್ಲ. ಅಶೋಕ ರಾಜೀನಾಮೆ ಕೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಧ್ವನಿ ಎತ್ತಿದ್ದಾರೆ ಎಂದರು.
ಆರ್.ಅಶೋಕ ಹೆಗಲ ಮೇಲೆ ಬಂದೂಕಿಟ್ಟು ಸಿದ್ದರಾಮಯ್ಯಗೆ ಗುರಿ ಇಟ್ಟಿದ್ದಾರೆ.ಸಿದ್ದರಾಮಯ್ಯ ಕಡೆ ಬಹಳ ಬಂದೂಕು ಇವೆ ಎಂಬುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ನಾನೆ ಜಡ್ಜ್ ಎಂಬ ಮನಸ್ಥಿತಿಯಿಂದ ಹೊರಬರಲಿ. ಹಾಗೆ ಹೊರ ಬಂದವರು ಆತ್ಮಸಾಕ್ಷಿ ಬಗ್ಗೆ ಮಾತಾಡಬಾರದು. ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ನೈತಿಕತೆ ಬಗ್ಗೆ ಮಾತನಾಡಿದ್ದಾರೆ. ಸಿಎಂಗೆ ಆತ್ಮಸಾಕ್ಷಿ ಎರಡು ಇರುವುದು ಸಂತಸದ ವಿಚಾರ ಎಂದರು.
ಯಾರು ಆತ್ಮ ನಂಬುತ್ತಾರೋ ಅವರು ಪರಮಾತ್ಮನನ್ನು ನಂಬಬೇಕು. ಪರಮಾತ್ಮ ಮತ್ತು ಆತ್ಮಕ್ಕೆ ಮೋಸ ಮಾಡಲು ಯಾರಿಗೂ ಆಗಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಳ್ಳು ಸಾಕ್ಷಿ ಮಾಡಬಹುದು. ಪರಮಾತ್ಮನ ಬಳಿ ಆಗಲ್ಲ. ನಿಜವಾಗಿಯೂ ಪರಮಾತ್ಮ ಆತ್ಮ ಇದೆ ಅಂತ ಒಪ್ಪುವುದಾದರೆ ಸಿಎಂ ಸಿದ್ದರಾಮಯ್ಯ ಸುಳ್ಳಿನ ಸಮರ್ಥನೆಗೆ ಇಳಿಯುತ್ತಿರಲಿಲ್ಲ ನಿಮ್ಮ ವಿಷಯದಲ್ಲಿ ವಕೀಲರು ನೀವೇ ಜಟ್ಸ್ ಕೂಡ ನೀವೇ ಎಂದು ಬೆಂಗಳೂರಿನಲ್ಲಿ ಪರಿಷತ್ತಿನ ಬಿಜೆಪಿ ಸದಸ್ಯ ಸಿಟಿ ರವಿ ವಾಗ್ದಾಳಿ ನಡೆಸಿದರು.