ಮೈಸೂರು : ಒಂದು ಕಡೆಗೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಇದರ ಮಧ್ಯ ಕಾಂಗ್ರೆಸ್ಸಿನ ಹಲವು ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ ಇಂದು ದಸರಾ ಮಹೋತ್ಸವದ ವೇದಿಕೆಯಲ್ಲಿ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಇನ್ನೊಂದು ವರ್ಷ ದೇವಿ ನನಗೆ ಅಧಿಕಾರ ನಡೆಸಲು ಆರ್ಶೀವಾದ ಮಾಡಲಿ ಎಂದು ತಿಳಿಸಿದ್ದಾರೆ.
ಹೌದು ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು,ಇನ್ನೊಂದು ವರ್ಷ ದೇವಿ ನನಗೆ ಅಧಿಕಾರ ನಡೆಸಲು ಆರ್ಶೀವಾದ ಮಾಡಲಿ. ಉತ್ತಮ ಕೆಲಸ ಮಾಡಲು ದೇವಿ ಇನ್ನೊಂದು ವರ್ಷವಾದರೂ ಆಶೀರ್ವದಿಸಲಿ. ಜನರ ಸೇವೆ ಮಾಡಲು ಆ ತಾಯಿ ಚಾಮುಂಡಿ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳುವೆ ಎಂದಿದ್ದಾರೆ.
ಇನ್ನೊಂದು ವರ್ಷದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದು, ರಾಜ್ಯಕ್ಕೆ ಹೊಸ ಸಿಎಂ ಆಯ್ಕೆ ಆಗಲಿದ್ದಾರೆ ಎಂಬ ಮಾತಿಗೆ ಇದೀಗ ಖುದ್ದು ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.ಅಧಿಕಾರದ ಹಂಚಿಕೆ ಬಗ್ಗೆಯೇ ಸಿಎಂ ಈ ರೀತಿಯ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಇನ್ನೊಂದು ವರ್ಷ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿದರೆ ಎರಡೂವರೆ ವರ್ಷ ಪೂರೈಸಿದಂತಾಗುತ್ತದೆ. ಒಂದು ವರ್ಷದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆ, ಕುತೂಹಲ ಇದೀಗ ಸಿಎಂ ಭಾಷಣ ಮೂಡಿಸಿದೆ.