ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷವೂ ನವರಾತ್ರಿಯಲ್ಲಿ 9 ದಿನಗಳ ಕಾಲ ಉಪವಾಸ ಮಾಡಲಿದ್ದು, ಇಂದಿನಿಂದ ವ್ರತ ಆರಂಭಿಸಿದ್ದಾರೆ. ಅಂದ್ಹಾಗೆ, ಪ್ರಧಾನಿ ಮೋದಿ ಅವರು ಕಳೆದ 45 ವರ್ಷಗಳಿಂದ ನವರಾತ್ರಿಯ ಉಪವಾಸವನ್ನ ಆಚರಿಸುತ್ತಿದ್ದು, ಪ್ರತಿ ವರ್ಷ ಮಾತೆ ದುರ್ಗೆಯ ವಿಶೇಷ ಪೂಜೆ ಮಾಡುತ್ತಾರೆ.
ಅದ್ರಂತೆ, ಪ್ರಧಾನಿ ಮೋದಿ ದೇಶವಾಸಿಗಳಿಗೆ ಶುಭ ಹಾರೈಸುತ್ತಾ “ಎಲ್ಲಾ ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿಯ ಆರಾಧನೆಗೆ ಮೀಸಲಾದ ಈ ಪವಿತ್ರ ಹಬ್ಬವು ಎಲ್ಲರಿಗೂ ಮಂಗಳಕರವಾಗಲಿ ಎಂದು ನಾವು ಬಯಸುತ್ತೇವೆ. ತಾಯಿ ದೇವತೆಗೆ ನಮಸ್ಕಾರ” ಎಂದಿದ್ದಾರೆ.
समस्त देशवासियों को नवरात्रि की असीम शुभकामनाएं। शक्ति-वंदना को समर्पित यह पावन पर्व हर किसी के लिए शुभकारी सिद्ध हो, यही कामना है। जय माता दी!
— Narendra Modi (@narendramodi) October 3, 2024
ನವರಾತ್ರಿಯ ಮೊದಲ ದಿನ, ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ತಾಯಿ ಶೈಲಪುತ್ರಿಯನ್ನು ಸ್ತುತಿಸುವ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಅವರು ಬರೆದ ಪೋಸ್ಟ್‌ನಲ್ಲಿ, “ನವರಾತ್ರಿಯ ಮೊದಲ ದಿನದಂದು, ಮಾ ಶೈಲಪುತ್ರಿಗೆ ಸಮರ್ಪಿತ ಪ್ರಾರ್ಥನೆ! ಎಲ್ಲರೂ ದೇವಿಯ ಕೃಪೆಯಿಂದ ಆಶೀರ್ವದಿಸಲ್ಪಡಲಿ. ಮಾತೃದೇವತೆಯ ಈ ಸ್ತುತಿ ನಿಮಗೆಲ್ಲರಿಗೂ…” ಎಂದು ಬರೆದಿದ್ದಾರೆ.
नवरात्रि के पहले दिन मां शैलपुत्री की करबद्ध प्रार्थना! उनकी कृपा से हर किसी का कल्याण हो। देवी मां की यह स्तुति आप सबके लिए… pic.twitter.com/sFCnbXSHys
— Narendra Modi (@narendramodi) October 3, 2024
BIG BREAKING : ಬೆಂಗಳೂರಿನ ಪೀಣ್ಯದಲ್ಲಿ ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ!
BIG UPDATE : ನನಗೆ ‘ED’ಯಿಂದ ಯಾವುದೇ ನೋಟಿಸ್ ಬಂದಿಲ್ಲ : ಸಚಿವ ಭೈರತಿ ಸುರೇಶ್ ಸ್ಪಷ್ಟನೆ
BREAKING: ಲೈಂಗಿಕ ಕಿರುಕುಳ ಕೇಸಲ್ಲಿ ‘ಜಾನಿ ಮಾಸ್ಟರ್’ಗೆ ತಾತ್ಕಾಲಿಕ ರಿಲೀಫ್: ‘ಕೋರ್ಟ್’ನಿಂದ 5 ದಿನ ಜಾಮೀನು ಮಂಜೂರು