ಹಾವೇರಿ : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಹಾಗೂ ತನ್ನ ವಿಪರೀತ ಕಾಮತೃಷೆಗಾಗಿ ತಾಳಿ ಕಟ್ಟಿದ್ದ ಗಂಡನನ್ನೇ ಹೆಂಡತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಭೀಕರವಾಗಿ ಕೊಂದಿರುವ ಘಟನೆ ಹಿರೆಕೇರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.
ಹೌದು, ಸಾಧಿಕ್ ಮತ್ತೂರು(30) ಕೊಲೆಯಾದ ದುರ್ದೈವಿ ಎಂದು ಹೇಳಲಾಗುತ್ತಿದ್ದು, ಇನ್ನೂ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿಯನ್ನು ಸಲ್ಮಾ (26) ಹಾಗೂ ಪ್ರಿಯಕರ ಜಾಫರ್ (28) ಆರೋಪಿಗಳು ಎಂದು ತಿಳಿದುಬಂದಿದೆ.ಕಳೆದ ಸೆಪ್ಟೆಂಬರ್ 25 ರಂದು ಈ ಒಂದು ಕೊಲೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಲ್ಮಾ ಜಾಫರ್ ಎಂಬುವವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಸಲ್ಮಾ – ಜಾಫರ್ ಸರಸ ಸಲ್ಲಾಪ ನೋಡಿ ಸಾಧಿಕ್ ಬೇಸತ್ತಿದ್ದನು. ಪತ್ನಿ ಸಲ್ಮಾಗೆ ಸಾಕಷ್ಟು ಸಲ ಸಾಧಿಕ್ ವಾರ್ನಿಂಗ್ ಕೂಡ ಮಾಡಿದ್ದನಂತೆ. ನಿಮ್ಮಿಬ್ಬರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಸಾಧಿಕ್ ವಾರ್ನಿಂಗ್ ಮಾಡಿದ್ದನು.
ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ನಮಗೆ ಸಂಕಷ್ಟ ಎಂದು ತಿಳಿದು ಪತ್ನಿ ಸಲ್ಮಾ, ಪ್ರಿಯಕರನೊಂದಿಗೆ ಸೇರಿ ಸೆ. 25 ರಂದು ರಾತ್ರೋ ರಾತ್ರಿ ಸಾಧಿಕ್ ಕುತ್ತಿಗೆಗೆ ಹಗ್ಗ ಬಿಗಿದು, ತಲೆ ದಿಂಬು ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.ಸಾಧಿಕ್ ಇನ್ನೂ ಜೀವಂತ ಇರಬಹುದು ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಸಲ್ಮಾ ಹಾಗೂ ಜಾಫರ್ ಮಚ್ಚಿನಿಂದ ಸಾಧಿಕ್ ತಲೆಗೆ ಹೊಡೆದಿದ್ದರು. ಬಳಿಕ ಬಾತ್ ರೂಂನಲ್ಲಿ ಕಾಲು ಜಾರಿ ಬಿದ್ದು ಗಂಡ ಸತ್ತಿರೋದಾಗಿ ಐನಾತಿ ಸಲ್ಮಾ ಕಥೆ ಕಟ್ಟಿದಳು.
ಆದರೆ ಪೊಲೀಸರು ಬಿಡಬೇಕಲ್ಲ ಈ ಒಂದು ಸಾವಿನ ಜಾಡನ್ನು ಹಿಡಿದುಕೊಂಡು ಹೋದ ಪೊಲೀಸರಿಗೆ ಬಿಗ್ ಶಾಕ್ ಎದುರಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರ ವಿಚಾರಣೆ ವೇಳೆ ಗಂಡನ ಮರ್ಡರ್ ಬಗ್ಗೆ ಸಲ್ಮಾ ಹಾಗೂ ಜಾಫರ್ ಕಥೆ ಬಿಚ್ಚಿಟ್ಟಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ನಡೆದಿದೆ.