ಬೆಂಗಳೂರು : ಬಿಜೆಪಿಯವರಿಗೆ ನಾಥೂರಾಮ್ ಗೋಡ್ಸೆ ನಾಯಕನಾಗಿದ್ದಾನೆ, ದೇಶಕ್ಕೆ ಸ್ವತಂತ್ರ ಕೊಟ್ಟ ಮಹಾತ್ಮ ಗಾಂಧೀಜಿಯವರು ಖಳನಾಯಕರಾಗಿದ್ದಾರೆ. ಬಿಜೆಪಿಯವರು ದೇಶವನ್ನು ಗೋಡ್ಸೆ ಭಾರತ ಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗರು ದೇಶವನ್ನು ಗೋಡ್ಸೆ ಭಾರತ ಮಾಡುವುದಕ್ಕೆ ಹೊರಟಿದ್ದಾರೆ. ಸುಳ್ಳು ಹೇಳಿ ದೇಶವನ್ನು ಒಡೆಯಲು ಹೊರಟವರು ಬಿಜೆಪಿಯವರು. ದೇಶದ ಉದ್ದಗಲಕ್ಕೆ ಜಾತಿ ಧರ್ಮದ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ.ಬಿಜೆಪಿಯವರು ಗೋಡ್ಸೆ ಭಾರತವನ್ನು ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೋಮು ಶಕ್ತಿಗಳು ದೇಶದ ಪ್ರಗತಿಗೆ ವಿರುದ್ಧವಾಗಿವೆ. ಕರ್ನಾಟಕದಲ್ಲಿ ನಾಲ್ಕು ವರ್ಷಗಳ ಕಾಲ ಬಿಜೆಪಿಯವರು ಅಧಿಕಾರದಲ್ಲಿದ್ದರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಬಡವರಿಗೆ ಶಕ್ತಿ ಕೊಡಲಿಲ್ಲ. ದೇಶ ಉದ್ಧಾರ ಆಗಬೇಕು ಸಮಾನತೆಯನ್ನು ಬಿಜೆಪಿ ಅವರು ಬಯಸಲ್ಲ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕೆಲಸ ಮಾಡಲಿಲ್ಲ.ಬದಲಾಗಿ ನಾವು ಮಾಡಿದ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಾರೆ.ಬಿಜೆಪಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಚುನಾವಣೆಗೆ ಮೊದಲೇ 5 ಗ್ಯಾರಂಟಿ ಘೋಷಣೆಯನ್ನು ಮಾಡಿದ್ದೆವು.ಅಧಿಕಾರಕ್ಕೆ ಬಂದ ಕೂಡಲೇ ಒಂದೇ ವರ್ಷದಲ್ಲಿ ಗ್ಯಾರಂಟಿ ಜಾರಿ ಮಾಡಿದೆವು. ಗಾಂಧೀಜಿ ವಿಶ್ವಕ್ಕೆ ನಾಯಕ ಎಂದು ಬರಾಕ್ ಒಬಾಮಾ ಹೇಳಿದ್ದರು. ಈ ಹೇಳಿಕೆಯನ್ನು ವಿರೋಧ ಪಕ್ಷಗಳು ಕೆಳಮಟ್ಟದಲ್ಲಿ ಮಾತನಾಡಿದರು. ಅವರಿಗೆ ಗೋಡ್ಸೆ ನಾಯಕ ಮಹಾತ್ಮ ಗಾಂಧೀಜಿ ಖಳನಾಯಕಬಿಜೆಪಿ ಷಡ್ಯಂತ್ರವನ್ನು ಕಾಂಗ್ರೆಸ್ ಪಕ್ಷ ನೆಟ್ಟಿ ನಿಲ್ಲಬೇಕು ಎಂದು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.