ಶಿವಮೊಗ್ಗ : ಹಾಲು ಮಾರಾಟದ ದರದಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡುತ್ತಿರುವುದು ಒಂದು ಕಡೆ ಆದರೆ, ಇನ್ನೊಂದು ಕಡೆ ಹಾಲು ಖರೀದಿಸುವ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನಷ್ಟದ ನೆಪ ಹೇಳಿ ಪ್ರತಿ ಲೀಟರ್ ಹಾಲಿನ ಮೇಲೆ 90 ಪೈಸೆ ಇಳಿಕೆ ಮಾಡಿ ಶಿಮೂಲ್ ತೀರ್ಮಾನಿಸಿದೆ.
ಹೌದು ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಶಾಕ್ ನೀಡಿದ ಶಿಮೂಲ್, ಪ್ರತಿ ಲೀಟರ್ ಹಾಲಿನ ಮೇಲೆ 90 ಪೈಸೆ ಇಳಿಕೆ ಮಾಡಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದ ಹಾಲು ಒಕ್ಕೂಟವಾದ ಶಿಮೂಲ್ ನಿಂದ ರೈತರಿಗೆ ಸಂಕಷ್ಟೇ ಎದುರಾಗಿದೆ. ನಷ್ಟದ ನೆನಪ ಹೇಳಿ ರೈತರಿಂದ ಖರೀದಿಸುವ ಹಾಲಿನ ದರ ಇಳಿಕೆ ಮಾಡಿದೆ.
ಶಿಮೂಲ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಿ ಈ ಒಂದು ದರ ಇಳಿಕೆ ಮಾಡಲಾಗಿದೆ. ಶಿಮೂಲ್ 7 ಕೋಟಿ ನಷ್ಟದಲ್ಲಿದ್ದು ಅದರಿಂದ ಹೊರಬರಲು ಖರೀದಿಯ ದರ ಇಳಿಕೆ ಮಾಡಲಾಗಿದೆ.ಹಾಗಾಗಿ ನಿನ್ನೆಯಿಂದಲೇ ನೂತನ ದರ ಜಾರಿಯಾಗಿದೆ. 33.03 ರೂಪಾಯಿಗೆ ಹಾಲು ಉತ್ಪಾದಕರ ಸೊಸೈಟಿಗಳಿಂದ ಶಿಮೂಲ್ ಹಾಲು ಖರೀದಿಸುತ್ತಿತ್ತು.