ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ಕೊಟ್ಟಿದ್ದಂತ 14 ಸೈಟ್ ಗಳನ್ನು ಮುಡಾಗೆ ಮರಳಿ ನೀಡಿದ್ದರು. ಈ 14 ಮುಡಾ ಸೈಟ್ ಗಳ ಕ್ರಯಪತ್ರವನ್ನು ರದ್ದುಗೊಳಿಸಲಾಗಿದ್ದು, ಮುಡಾ ಮರಳಿ ವಾಪಾಸ್ ಪಡೆದಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಮೈಸೂರು ಮುಡಾ ಆಯುಕ್ತ ರಘುನಂದನ್ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿಯವರು 14 ಸೈಟ್ ಗಳನ್ನು ಮುಡಾಗೆ ವಾಪಾಸ್ ಮಾಡಿದ್ದಾರೆ. ಅವುಗಳನ್ನು ಮುಡಾ ಪಡೆದಿದೆ ಎಂದರು.
ಪಾರ್ವತಿಯವರು ಸ್ವಇಚ್ಛೆಯಿಂದ ತಮಗೆ ನೀಡಿದ್ದಂತ 14 ಸೈಟ್ ಗಳನ್ನು ವಾಪಾಸ್ ಮಾಡಿದ್ದಾರೆ. ಹೀಗಾಗಿ 14 ಮುಡಾ ಸೈಟ್ ಗಳ ಕ್ರಯಪತ್ರ ರದ್ದುಗೊಳಿಸಲಾಗಿದೆ ಎಂಬುದಾಗಿ ತಿಳಿಸಿದರು.
ಸ್ವಇಚ್ಛೆಯಿಂದ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಅವರು ಕೊಟ್ಟಿದ್ದಾರೆ. ನಾವು ಸ್ವೀಕರಿಸಿದ್ದೇವೆ. ಇದನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂಬುದಾಗಿ ಹೇಳಿದರು.
ಶಿವಮೊಗ್ಗ: ಸಾಗರದಲ್ಲಿ ವಾರದಲ್ಲಿ 7 ದಿನ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಸಚಿವ ಮಧು ಬಂಗಾರಪ್ಪ ಚಾಲನೆ
BREAKING : ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : 17 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ!
BIG BREAKING: ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ವಾಪಾಸ್ ನೀಡಿದ್ದ 14 ಮುಡಾ ನಿವೇಶನಗಳ ಖಾತೆ ರದ್ದು