ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಹಾಗೂ ಇಡಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಮುಡಾ ಆಯುಕ್ತರಿಗೆ ಪತ್ರದ ಮೂಲಕ ನಿವೇಶನಗಳನ್ನು ಹಿಂದಿರುಗಿಸುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ತಪ್ಪೇ ಮಾಡಿಲ್ಲ ಎಂದರೆ ರಾಜೀನಾಮೆ ಕೊಡು ಪ್ರಶ್ನೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಜಮೀನನ್ನು ಡಿ ನೋಟಿಫೈ ಮಾಡಿದ್ದರು. ಅವತ್ತು ಯಡಿಯೂರಪ್ಪ ತಪ್ಪು ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ನಾನು ತಪ್ಪು ಮಾಡಿಲ್ಲ ರಾಜಿನಾಮೆ, ಯಾಕೆ ನೀಡಬೇಕು ಕಾನೂನು ಹೋರಾಟ ಮಾಡುತ್ತೇನೆ ಎಂದು ಅವರು ಮತ್ತೆ ತಿಳಿಸಿದ್ದಾರೆ.
ಯಡಿಯೂರಪ್ಪನವರು ಡಿನೋಟಿಫೈ ಮಾಡಿದ್ದರು. ನಾನೇನಾದರೂ ಡಿನೋಟಿಫೈ ಮಾಡಿದ್ದೀನಾ? ಅಥವಾ ನಂದೇನಾದರೂ ಆದೇಶ ಇದೆಯಾ? ಅಥವಾ ನಂದೇನಾದರೂ ಪತ್ರ ವ್ಯವಹಾರ ಇದೆಯಾ? ಅಥವಾ ಮನಿಲ್ಯಾಂಡ್ ರಿಂಗ್ ಇದೆಯಾ? ಆ ಪ್ರಕರಣಕ್ಕೂ ಈ ಪ್ರಕರಣಕ್ಕೂ ಬಹಳ ವ್ಯತ್ಯಾಸ ಇದೆ.ಅವರು ಅನಗತ್ಯವಾಗಿ ರಾಜೀನಾಮೆ ಕೇಳುತ್ತಿದ್ದಾರೆ ಆದರೆ ನಾನು ತಪ್ಪೇ ಮಾಡಿಲ್ಲ. ಅಂದರೆ ರಾಜೀನಾಮೆಯಾಗಿ ಕೊಡಬೇಕು? ಆತ್ಮಸಾಕ್ಷಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
2011ರಲ್ಲಿ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ರಾಷ್ಟ್ರಪತಿಯವರು ಈ ದೇಶದ ಸಂವಿಧಾನದ ಹೆಡ್. ಅವರ ಪ್ರತಿನಿಧಿಯಾಗಿ ರಾಜ್ಯಪಾಲರು ಪ್ರತಿ ರಾಜ್ಯದಲ್ಲಿ ಕೆಲಸ ಮಾಡುತ್ತಾರೆ.ಒಂದು ಸರ್ಕಾರ ಸಂವಿಧಾನದ ಕೆಲಸ ಮಾಡ್ತಾ ಇದೆ ಎಲ್ಲವನ್ನು ನೋಡಿಕೊಳ್ಳುವ ಉಸ್ತುವಾರಿ ರಾಜ್ಯಪಾಲರಿಗೆ ಇರುತ್ತದೆ. ಸರ್ಕಾರ ತಪ್ಪು ಮಾಡಿದರೆ ಆ ಸರ್ಕಾರಕ್ಕೆ ಎಚ್ಚರಿಕೆ ಕೊಡುವಂತಹ ಅವರಿಗೆ ಬುದ್ಧಿ ಹೇಳುವಂತಹ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ.
ರಾಜಕೀಯ ಪ್ರೇರಿತ ದುರುದ್ದೇಶದಿಂದ ಮಾಡಿದ್ದಾರೆ, ಇದು ಫ್ರೀ ಪ್ಲಾನ್, ವಿರೋಧ ಪಕ್ಷದವರು ಮಾಡಿಸುತ್ತಿದ್ದಾರೆ ಅಂತ ಹೇಳಿದ್ದಾರೆ. ಅವರ ಪುತ್ರರಿಗೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರಲ್ಲ ಅದನ್ನ ವಾಪಸ್ ಯಾಕೆ ಕೊಡಬೇಕು? ಕಾನೂನುಬಾಹಿರವಾಗಿ ಮಾಡಿದ್ದರಿಂದ ವಾಪಸ್ ಕೊಟ್ಟಿದ್ದಾರೆ ಅಲ್ವಾ? ಅವರೇ ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಲ್ವಾ? ಎಂದು 2011ರಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು.