ಚಿಕ್ಕಮಗಳೂರು : ಕೊಳಲು ನುಡಿಸುವ ಶಾಲೆಗೆ ಸೇರಿಸದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಒಬ್ಬ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.
ಹೌದು ಶೃಂಗೇರಿಯ ಹರಿಹರ ಬೀದಿಯ ಬಿದಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಧ್ರುವ ನೇಣಿಗೆ ಶರಣಾಗಿರುವ ವಿದ್ಯಾರ್ಥಿಯನ್ನು ಧ್ರುವ (16) ಎಂದು ತಿಳಿದು ಬಂದಿದೆ. ನನಗೆ ಕೊಳಲು ನುಡಿಸುವ ಶಾಲೆಗೆ ಸೇರಿಸಿ ಎಂದು ಈಗಾಗಲೇ ಧ್ರುವ ಪೋಷಕರ ಬಳಿ ತಿಳಿಸಿದ್ದ.
ಈ ವೇಳೆ ಪೋಷಕರಿಗೆ ಧ್ರುವ ಒತ್ತಾಯ ಮಾಡಿದ್ದ ಎಸ್ ಎಸ್ ಎಲ್ ಸಿ ವ್ಯಾಸಂಗ ಮುಗಿದ ನಂತರ ಪೋಷಕರು ಕೊಳಲು ನುಡಿಸುವ ಶಾಲೆಗೆ ಸೇರಿಸುವುದಾಗಿ ಹೇಳಿದ್ದರುಬೇಸರದಿಂದ ಪರೀಕ್ಷೆಗೆ ಗೈರಾಗಿ ಧ್ರುವ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.