ಬೆಂಗಳೂರು : ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಭಾರತೀಯ ಸಂಪ್ರದಾಯದಲ್ಲಿ ಗೋವಿನ ಸಾಂಸ್ಕೃತಿಕ ಮಹತ್ವವನ್ನ ಗುರುತಿಸಿ ಅಧಿಕೃತವಾಗಿ ‘ರಾಜ್ಯ ಮಾತಾ’ ಎಂದು ಘೋಷಿಸಿದೆ. ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಬಿವೈ ವಿಜಯೇಂದ್ರ ಸ್ವಾಗತಿಸಿದ್ದು, ಕರ್ನಾಟಕದಲ್ಲೂ ಗೋವನ್ನು ರಾಜ್ಯ ಮಾತೆ ಅಥವಾ ಕ್ಷೀರಮಾತೆ ಎಂದು ಘೋಷಿಸಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡ ಬಿವೈ ವಿಜಯೇಂದ್ರ,ಗೋಮಾತೆಯನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನಂದಿನಿ ಉತ್ಪನ್ನಗಳ ಮೂಲಕ ಕರ್ನಾಟಕ ವಿಶ್ವ ಮಾನ್ಯತೆ ಪಡೆಯುತ್ತಿದೆ. ನಂದಿನಿ ಉತ್ಪನ್ನಗಳ ಧಾತೆ ಗೋ ಮಾತೆ ಆದ್ದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋವನ್ನು ರಾಜ್ಯ ಮಾತೆ ಎಂದೇ ಘೋಷಿಸಲಿ ಇಲ್ಲವೇ ‘ಕ್ಷೀರಮಾತೆ’ ಎಂದು ಘೋಷಿಸಲಿ ಎಂದು ತಿಳಿಸಿದ್ದಾರೆ.
ಗೋಮಾತೆಯನ್ನು 'ರಾಜ್ಯ ಮಾತೆ' ಎಂದು ಘೋಷಿಸಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನಂದಿನಿ ಉತ್ಪನ್ನಗಳ ಮೂಲಕ ಕರ್ನಾಟಕ ವಿಶ್ವ ಮಾನ್ಯತೆ ಪಡೆಯುತ್ತಿದೆ. ನಂದಿನಿ ಉತ್ಪನ್ನಗಳ ಧಾತೆ ಗೋ ಮಾತೆ ಆದ್ದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋವನ್ನು ರಾಜ್ಯ ಮಾತೆ ಎಂದೇ ಘೋಷಿಸಲಿ ಇಲ್ಲವೇ ‘ಕ್ಷೀರಮಾತೆ’ ಎಂದು ಘೋಷಿಸಲಿ. pic.twitter.com/5hKCWHufSz
— Vijayendra Yediyurappa (@BYVijayendra) September 30, 2024