ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಸಿಬಿಐಗೆ ನೀಡಿದ್ದಂತ ಮುಕ್ತ ತನಿಖಾ ಅವಕಾಶ ಹಿಂಪಡೆದ ನಿರ್ಧಾರ ಸರಿಯಾಗಿದೆ. ಕೇವಲ ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬಚಾವ್ ಮಾಡೋದಕ್ಕೆ ಎಂಬುದು ಸುಳ್ಳು. ಸಿಬಿಐ ತನಿಖೆಗೆ ಕೊಟ್ಟ ಎಲ್ಲಾ ಕೇಸಲ್ಲೂ ನ್ಯಾಯ ಸಿಕ್ಕಿದ್ಯಾ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದರು.
ಇಂದು ಕಾರ್ಗಲ್ ಪೊಲೀಸ್ ಠಾಣೆಗೆ ನೂತನ ಬೊಲೆರೋ ವಾಹನವನ್ನು ಸಾಗರದ ಡಿವೈಎಸ್ಪಿ ಕಚೇರಿಯ ಬಳಿಯಲ್ಲಿ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕಿನ ಪೊಲೀಸ್ ಠಾಣೆಗಳ ಕೆಲವು ಜೀಪುಗಳು ಹಾಳಾಗಿದ್ದವು. ಈ ಬಗ್ಗೆ ನನ್ನ ಗಮನಕ್ಕೆ ತರಲಾಗಿತ್ತು. 170 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿರುವಂತ ಕಾರ್ಗಲ್ ಪೊಲೀಸ್ ಠಾಣೆಗೆ ಕರ್ತವ್ಯ ನಿರ್ವಹಣೆಗೆ ವಾಹನ ಅಗತ್ಯವಿದ್ದದ್ದು ಗಮನಕ್ಕೆ ಬಂದಿತ್ತು. ಈಗ ಹೊಸ ಕಾರನ್ನು ನೀಡಲಾಗಿದೆ ಎಂದರು.
ಕಾರ್ಗಲ್ ಠಾಣೆಗೆ ಹೊಸ ಬೊಲೆರೋ ಕಾರನ್ನು ಹಸ್ತಾಂತರಿಸಲಾಗಿದೆ. ಪೊಲೀಸರು ಮತ್ತಷ್ಟು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತ ಕೆಲಸ ಮಾಡಲಾಗಿದೆ. ಅವರ ಸಮಸ್ಯೆ ನಿವಾರಿಸಲು ನಿಮ್ಮೊಂದಿಗೆ ನಾನಿರುವುದಾಗಿ ಶಾಸಕರು ಹೇಳಿದರು.
ಈಗಾಗಲೆ ಕ್ಷೇತ್ರದ ಆನಂದಪುರ ಠಾಣೆಗೆ ಹಾಗೂ ರಿಪ್ಪನಪೇಟೆ ಠಾಣೆಗೂ ಸಹ ಹೂಸ ಪೋಲೀಸ್ ಜೀಪ್ ನೀಡಲಾಗುತ್ತಿದೆ. ಅಲ್ಲದೆ ಕಾರ್ಗಲ್ ಠಾಣೆಗೆ ಹೂಸ ಕಟ್ಟಡಕ್ಕೂ ಅನುಮತಿಯನ್ನು ನೀಡಿ ಈಗಾಗಲೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಪೋಲೀಸ್ ಕ್ವಾಟ್ರಾಸ್ ಕೂಡ ಹೂಸದಾಗಿ ಕಟ್ಟಲಾಗುತ್ತಿದೆ. ಇದೇ ರೀತಿ ಆಂನಂದಪುರ ಹಾಗೂ ಹೂಸನಗರ ಪೋಲೀಸ್ ಕ್ವಾಟ್ರಾಸ್ ಕಟ್ಟಲು ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.
ಬಾರಂಗಿ ಹೋಬಳಿಯ ಕಟ್ಟಿನಕಾರಿನಲ್ಲಿ ಹೂಸದಾದ ಪೋಲೀಸ್ ಠಾಣೆ ನೀಡಬೇಕು ಎನ್ನುವ ಮನವಿ ಆ ಬಾಗದ ಜನರು ನೀಡಿದ್ದಾರೆ ಈ ಬಗ್ಗೆಯೂ ಕೂಡ ಸಂಭಂದಪಟ್ಟ ಸಚಿವರಿಗೆ ಮನವಿ ಮಾಡಿದ್ದೇನೆ ಆದಷ್ಟು ಬೇಗ ಅದು ಕೂಡ ಈಡೇರುವ ಬರವಸೆಯನ್ನು ನೀಡುತ್ತೇನೆ. ಸಾಗರ ಪೋಲೀಸ್ ವಸತೀ ಗೃಹ ಹಳೆಯದಾಗಿದ್ದು ಅದು ನೂತನವಾಗಿ ಕಟ್ಟಲು ನೀಲಿನಕ್ಷೆಯನ್ನು ತಯಾರು ಮಾಡಬೇಕಾಗಿದೆ. ಸಾಗರ ನಗರ ಪೋಲೀಸ್ ಠಾಣೆಯೂ ಕೂಡ ಹೂಸದಾಗಿ ಕಟ್ಟುವ ಬಗ್ಗೆ ಈಗಾಗಲೆ ಅನುಮೋದನೆಯಾಗಿದ್ದು ಸಲ್ಪದಿನದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
‘CBI ತನಿಖೆ’ಗೆ ಕೊಟ್ಟ ಎಲ್ಲಾ ‘ಕೇಸ್’ನಲ್ಲೂ ನ್ಯಾಯ ಸಿಕ್ಕಿದ್ಯಾ?
ರಾಜ್ಯದಲ್ಲಿನ ಪರೇಸ್ತಾ, ಡಿ.ಕೆ ರವಿ ಸೇರಿದಂತೆ ವಿವಿಧ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಈ ತನಿಖೆಯಲ್ಲಿ ಏನಾದರೂ ನ್ಯಾಯ ಸಿಕ್ಕಿದ್ಯಾ? ಸತ್ಯ ಹೊರಗೆ ಬಂದಿದ್ಯಾ? ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ಸಿಬಿಐ ತನಿಖೆಗೆ ಮುಡಾ ಹಗರಣವನ್ನು ವಹಿಸಬಾರದು ಎಂಬುದಾಗಿ ಸಿಬಿಐಗೆ ನೀಡಿದ್ದಂತ ಮುಕ್ತ ಅವಕಾಶವನ್ನು ಹಿಂಪಡೆದಿಲ್ಲ. ಈಗಾಗಲೇ ಹೆಚ್.ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಸೇರಿ ರಾಜ್ಯದ ಅನೇಕ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ. ಶೋಭಾ ಕರಂದ್ಲಾಜೆ ಮಾತ್ರ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಮುಡಾ ಕೇಸ್ ನಿಂದ ಸಿಎಂ ಸಿದ್ಧರಾಮಯ್ಯ ಅವರನ್ನು ಮುಗಿಸೋದಕ್ಕೆ ಸಾಧ್ಯವಿಲ್ಲ. ರಾಜಕೀಯವಾಗಿ ಮುಗಿಸೋದಕ್ಕೆ ಸಾಧ್ಯವಾಗದ ಕಾರಣ ಸಿಬಿಐಗೆ ಕೇಸ್ ನೀಡಿ ಅಂತ ಬಿಜೆಪಿಯವರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಗುಡುಗಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವುದು ದ್ವೇಷದ ಭಾಷಣವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
BREAKING: ಉಜ್ಜಯಿನಿಯಲ್ಲಿ ಭಾರೀ ಮಳೆಗೆ ಮಹಾಕಾಲ್ ದೇವಾಲಯದ ಗೋಡೆ ಕುಸಿತ: ಇಬ್ಬರು ಸಾವು | Ujjain Mahakal Temple