Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಕಳ್ಳರ ಅಟ್ಟಹಾಸ : `SUV’ಕಾರು ಸುತ್ತುವರಿದು `2.5 ಕೆಜಿ ಚಿನ್ನ ದೋಚಿದ ಖದೀಮರು! Video Viral
INDIA

ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಕಳ್ಳರ ಅಟ್ಟಹಾಸ : `SUV’ಕಾರು ಸುತ್ತುವರಿದು `2.5 ಕೆಜಿ ಚಿನ್ನ ದೋಚಿದ ಖದೀಮರು! Video Viral

By kannadanewsnow5727/09/2024 9:10 AM

ಕೊಚ್ಚಿ : ಕೇರಳದ ತ್ರಿಶೂರ್ ನ ಪಿಚಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ 2.5 ಕೆಜಿ ಚಿನ್ನಾಭರಣ ದರೋಡೆಯ ವಿಡಿಯೋ ವೈರಲ್ ಆಗುತ್ತಿದೆ. 12 ಜನರ ತಂಡ ಕಾರನ್ನು ಸುತ್ತುವರಿದು ಅದರಲ್ಲಿ ಕುಳಿತಿದ್ದ ಇಬ್ಬರನ್ನು ಅಪಹರಿಸಿ 2.5 ಕೆಜಿ ಚಿನ್ನಾಭರಣ ದೋಚಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಡ್ಯಾಶ್‌ಕ್ಯಾಮ್‌ನಿಂದ ರೆಕಾರ್ಡ್ ಮಾಡಲಾಗಿದೆ. ಸೆಪ್ಟೆಂಬರ್ 22 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ಈ ಬಗ್ಗೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸಂಪರ್ಕ ರಸ್ತೆ ಕಿರಿದಾಗಿದೆ. ವಾಹನಗಳು ವೇಗವನ್ನು ಕಡಿಮೆ ಮಾಡಿಕೊಂಡು ಸಾಗಬೇಕಾಗಿತ್ತು. ಕಾರನ್ನು ಸುತ್ತುವರಿದ ಖದೀಮರು ಆಭರಣ ವ್ಯಾಪಾರಿ ಅರುಣ್ ಸನ್ನಿ ಮತ್ತು ಆತನ ಸ್ನೇಹಿತೆ ರೋಸಿ ಥಾಮಸ್ ಅವರನ್ನು ಅಪಹರಿಸಿದ್ದಾರೆ.

2.5 kg gold, being transported by car from Coimbatore to Thrissur, was stolen by a gang in three vehicles. #goldrobbery https://t.co/ciGUO7fW7u pic.twitter.com/qBIcZyGnuW

— Onmanorama (@Onmanorama) September 26, 2024

ಈ ಸ್ಥಳದಲ್ಲಿ, ಮೂರು ಎಸ್‌ಯುವಿ ಕಾರುಗಳು ಕಾರನ್ನು ಸುತ್ತುವರೆದಿವೆ. ಇದಾದ ನಂತರ 10 ರಿಂದ 12 ಮುಸುಕುಧಾರಿಗಳು ಎಸ್‌ಯುವಿ ಕಾರುಗಳಿಂದ ಹೊರಬಂದು ಬಂದೂಕು ತೋರಿಸಿ ಕಾರಿನಲ್ಲಿ ಕುಳಿತಿದ್ದ ಇಬ್ಬರನ್ನು ಅಪಹರಿಸಿದ್ದಾರೆ.

ದುಷ್ಕರ್ಮಿಗಳು ಉದ್ಯಮಿ ಅರುಣ್ ಸನ್ನಿ ಮತ್ತು ಅವರ ಸ್ನೇಹಿತೆ ರೋಸಿ ಥಾಮಸ್ ಅವರನ್ನು ಥಳಿಸಿ ಅವರಲ್ಲಿದ್ದ 2.5 ಕೆಜಿ ಚಿನ್ನಾಭರಣವನ್ನು ದೋಚಿದ್ದಾರೆ. ನಂತರ ದುಷ್ಕರ್ಮಿಗಳು ಇಬ್ಬರನ್ನೂ ನಿರ್ಜನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದಾರೆ.

ಆಭರಣ ಉದ್ಯಮಿ ಅರುಣ್ ಸನ್ನಿ ಮತ್ತು ಅವರ ಸ್ನೇಹಿತೆ ರೋಸಿ ಥಾಮಸ್ ಸೆಪ್ಟೆಂಬರ್ 25 ರಂದು ಪೊಲೀಸ್ ಠಾಣೆಗೆ ಆಗಮಿಸಿ, ತಮ್ಮನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಅವರನ್ನು ಥಳಿಸಿ 1.84 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಸಂತ್ರಸ್ತೆಯ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕಳ್ಳರಿಗಾಗಿ ಶೋಧ ನಡೆಯುತ್ತಿದೆ.

Kerala national highway robbed of 2.5 kg gold by thieves in broad daylight ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಕಳ್ಳರ ಅಟ್ಟಹಾಸ : `SUV'ಕಾರು ಸುತ್ತುವರಿದು `2.5 ಕೆಜಿ ಚಿನ್ನ ದೋಚಿದ ಖದೀಮರು!
Share. Facebook Twitter LinkedIn WhatsApp Email

Related Posts

ಕತಾರ್‌ನಲ್ಲಿ ಮಾಜಿ ನೌಕಾ ಅಧಿಕಾರಿ ಬಂಧನ: ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ, ಪೂರ್ಣ ಬೆಂಬಲ ನೀಡುತ್ತೇವೆ ಎಂದ ಭಾರತ!

23/04/2026 9:20 PM1 Min Read

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮತದಾರರ ಅಭೂತಪೂರ್ವ ಉತ್ಸಾಹ, ದಾಖಲೆ ಬರೆದ ಮತದಾನ!

23/04/2026 9:20 PM2 Mins Read

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ-ಪಾಕಿಸ್ತಾನ ದೋಸ್ತಿ: ‘ತಿಯಾಂಗಾಂಗ್’ ಗಗನಯಾನಕ್ಕೆ ಇಬ್ಬರು ಪಾಕ್ ಅಭ್ಯರ್ಥಿಗಳ ಆಯ್ಕೆ!

23/04/2026 8:51 PM1 Min Read
Recent News

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

23/04/2026 11:02 PM

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM

ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ

23/04/2026 9:56 PM
State News
KARNATAKA

ಶಿವಮೊಗ್ಗ: ಸೊರಬದ ಉಳವಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಅದ್ಭುತ ಸಾಧನೆ, ಶೇ.98.76ರಷ್ಟು ಫಲಿತಾಂಶ

By kannadanewsnow0923/04/2026 11:02 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ…

SSLC ಪರೀಕ್ಷೆಯಲ್ಲಿ ಮಿಂಚಿದ ಸೊರಬದ ಉಳವಿಯ ಪ್ರತಿಭೆ: ವಕೀಲರಾದ ಪ್ರಶಾಂತ್ ಪುತ್ರಿ ತನ್ಮಯಿಗೆ 582 ಅಂಕ!

23/04/2026 10:45 PM

SSLC ಪರೀಕ್ಷೆಯಲ್ಲಿ ರೈತನ ಮಗಳು ಅದ್ಭುತ ಸಾಧನೆ: ಹಿರಿಯೂರಿನ ಮೋಹನ್ ಕುಮಾರ್ ಪುತ್ರಿ ಲಿಖಿತಾಗೆ 529 ಅಂಕ

23/04/2026 10:20 PM

ತಂದೆ-ತಾಯಿಯ ಕನಸು ನನಸು ಮಾಡಿದ ಅಭಿನವ್: ಸೊರಬ ಉಳವಿಯ ಪವಾರ್ ಡಾಕ್ಟರ್ ಪುತ್ರ SSLC ಪರೀಕ್ಷೆಯಲ್ಲಿ 597 ಅಂಕ

23/04/2026 9:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.