ಬೆಂಗಳೂರು : ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಲಾಗಿರುವ ಮುಕ್ತ ಒಪ್ಪಿಗೆಯನ್ನು ಹಿಂಪಡೆಯುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ವಿಚಾರವಾಗಿ ಇದು ಕರ್ನಾಟಕದ ಸರ್ಕಾರ ಸರ್ವಾಧಿಕಾರ ಧೋರಣೆ ತೋರಿಸುತ್ತದೆ. ರಾಜ್ಯದಲ್ಲಿ ಎಷ್ಟೇ ಲೂಟಿ ಭ್ರಷ್ಟಾಚಾರ ಆದರೂ ಸಿಬಿಐ ತನಿಖೆ ಆಗಬಾರದು. ರಾಜ ಕಾಂಗ್ರೆಸ್ ಸರ್ಕಾರ ಈ ಒಂದು ನಿರ್ಣಯದಿಂದ ಕರ್ನಾಟಕವನ್ನು ಬಿಹಾರ ರಾಜ್ಯದ ಜಂಗಲ್ ರಾಜ್ ಮಾಡಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಒಂದು ನಿರ್ಣಯದಿಂದ, ಲೂಟಿಕೋರರಿಗೆ ಸ್ವರ್ಗ ಆಗಬೇಕೆಂಬ ರೀತಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಕ್ಕೆ ಸಿಬಿಐ ಬರಬಾರದೆಂದು ನಿರ್ಧಾರ ಕೈಗೊಂಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣದಲ್ಲಿ ಸಿಲುಕಿದೆ.ಸಿಬಿಐ ಬಂದರೆ ಬಂಧನವಾಗುತ್ತದೆ ಎಂದು ಭಾಗಿಯಾದ ಸಚಿವರಿಗೆ ಸಮಸ್ಯೆಯಾಗುತ್ತದೆ ಎಂದು ಇಂತಹ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಒಂದು ನಿರ್ಣಯ ಕೈಗೊಂಡಿದೆ.
ಈ ಹಿಂದೆ ಲೋಕಾಯುಕ್ತ ಮುಚ್ಚಿ ಹಾಕಿದ್ದವರು, ಈಗ ಸಿಬಿಐ ಮುಚ್ಚಲು ಹೊರಟಿದ್ದಾರೆ. ಲಾಲು ಪ್ರಸಾದ್ ಯಾದವ್ ಅವಧಿಯಲ್ಲಿ ಬಿಹಾರ ಹೇಗಿತ್ತೋ ಹಾಗೆ ಕರ್ನಾಟಕವನ್ನು ಜಂಗಲ್ ರಾಜ್ ಮಾಡುತ್ತಿದ್ದಾರೆ. ಕರ್ನಾಟಕ ಲೂಟಿಕೋರರಿಗೆ ಸ್ವರ್ಗ ಆಗುವ ರೀತಿ ಮಾಡುತ್ತಿದ್ದಾರೆ. ಸಂಪುಟ ಸಭೆಯಲ್ಲಿ ನಿರ್ಧರಿಸಿ ಗವರ್ನರ್ ಗೆ ಮಾಹಿತಿ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.ರಾಜ್ಯಪಾಲರು ಮಾಹಿತಿ ಕೇಳುವುದು ಅವರ ಸಂವಿಧಾನಾತ್ಮಕ ಅಧಿಕಾರವಾಗಿದೆ.
ಸಿದ್ದರಾಮಯ್ಯ ಸಚಿವರು ರಾಜ್ಯಪಾಲರಿಂದ ಪ್ರಮಾಣವಚನವನ್ನು ಸ್ವೀಕರಿಸಿದ್ದರು ಈಗ ರಾಜ್ಯಪಾಲರಿಗೆ ಯಾವುದೇ ಮಾಹಿತಿ ನೀಡುವುದಿಲ್ಲವೆಂದರೆ ಹೇಗೆ ಈಗ ಸಿಎಂ ಸಚಿವರು ರಾಜ್ಯಪಾಲರಿಗೆ ತಿರುಗುಬಾಣ ಬಿಡಲು ಹೊರಟಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರಶೋಕ್ ಹೇಳಿಕೆ ನೀಡಿದರು.