ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಲೋಕಾಯುಕ್ತ ಎಸ್ ಪಿ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟಿರಬೇಕು, ಇಲ್ಲವಾದರೆ ಕಿಡ್ನಾಪ್ ಮಾಡಿರಬಹುದು ಎಂದು ಆರೋಪಿಸಿ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ ಕಾಣೆಯಾಗಿದ್ದಾರೆ ಎಂದು ಇದೀಗ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದಾರೆ.ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಬೆಳಗ್ಗೆಯಿಂದಲೂ ಲೋಕಾಯುಕ್ತ ಎಸ್ ಪಿ ಉದೇಶ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಸ್ ಪಿ ಉದೇಶ ಯಾವ ಕಾರಣಕ್ಕೆ ಹಾಗೂ ಎಲ್ಲಿಗೆ ಹೋಗಿದ್ದಾರೆ? ಎಂದು ಗೊತ್ತಿಲ್ಲ. ಲೋಕಾಯುಕ್ತ ಕಚೇರಿಯಲ್ಲಿ ಕೇಳಿದರು ನನಗೆ ಮಾಹಿತಿ ನೀಡುತ್ತಿಲ್ಲ. ದೂರವಾಣಿ ಕರೆ ಮಾಡಿದ್ದೇನೆ, ಮೆಸೇಜ್ ಮಾಡಿದರು ಸಹ ಎಸ್ ಪಿ ಉದೇಶ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಹಾಗಾಗಿ ಲೋಕಾಯುಕ್ತ ಎಸ್ಪಿ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟಿರಬೇಕು. ಇಲ್ಲದಿದ್ದರೆ ಅಪಹರಣ ಮಾಡಿರಬೇಕು ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಎಂದು ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸದೆ ವಾಪಾಸ್ ಕಳುಹಿಸಿದ ಪೊಲೀಸರು
ಲೋಕಾಯುಕ್ತ ಎಸ್ ಪಿ ಕಾಣೆಯಾಗಿದ್ದಾರೆ ಎಂದು ದೂರು ನೀಡಲು ಹೋದ ಸ್ನೇಹಮಯಿ ಕೃಷ್ಣ ದೂರು ಸ್ವೀಕರಿಸಿದೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ.ಕನಿಷ್ಠ ಪಕ್ಷ ಕಚೇರಿಯಿಂದ ದೂರವಾಣಿ ಕರೆ ಮಾಡಿ ಎಸ್ಪಿ ಎಲ್ಲಿದ್ದಾರೆ ಎಂದು ಸೌಜನ್ಯಕ್ಕಾದರೂ ಪೊಲೀಸರು ವಿಚಾರಣೆ ಮಾಡಲಿಲ್ಲ. ಹಾಗಾಗಿ ಈ ಕುರಿತು ದೇವರಾಜ ವಿಭಾಗದ ಎಸಿಪಿಗೆ ದೂರು ನೀಡುತ್ತೇನೆ ಎಂದು ದೇವರಾಜ್ ಠಾಣೆ ಬಳಿ ಸ್ನೇಹ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.