ಬಿಹಾರ: ‘ಜೀವಿಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಬಿಹಾರದ 15 ಜಿಲ್ಲೆಗಳ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 43 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಕಾಣೆಯಾಗಿದ್ದಾರೆ.
ಹಬ್ಬದ ಆಚರಣೆಯ ಸಮಯದಲ್ಲಿ ಮುಳುಗಿ ಸಾವನ್ನಪ್ಪಿದ 37 ಮಕ್ಕಳು ಸೇರಿದಂತೆ ಸಾವುನೋವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
‘ಜೀವಿಪುತ್ರಿಕಾ’ ಹಬ್ಬದ ಸಮಯದಲ್ಲಿ, ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತ ಪದ್ಧತಿಯಾಗಿದೆ.
ಇದೀಗ ಬಿಹಾರದಲ್ಲಿ ಪವಿತ್ರ ಗಂಗಾ ಸ್ನಾನದ ವೇಳೆಯಲ್ಲಿ ಘೋರ ದುರಂತವೇ ನಡೆದು 37 ಮಕ್ಕಳು ಸೇರಿದಂತೆ 43 ಮಂದಿ ಜಲಸಮಾಧಿಯಾಗಿದ್ದಾರೆ.
ಮೈಸೂರಲ್ಲಿ ಕುಶಲತೋಪು ಸಿಡಿಸುವ ತಾಲೀಮು ವೇಳೆ ಹಾರಿ ಬಂದ ಡ್ರೋನ್: ಪೊಲೀಸರು ವಶಕ್ಕೆ