ಬೆಂಗಳೂರು : ಸದಾಶಿವನಗರ, ಜಯಮಹಲ್, ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತ, ದೊಮ್ಮಲೂರು, ಹಳೆ ವಿಮಾನ ರಸ್ತೆ, ರಿಚ್ಮಂಡ್ ರಸ್ತೆ, ಮಾರೇನಹಳ್ಳಿ, ಬನಶಂಕರಿ, ಮೈಸೂರು ಜಂಕ್ಷನ್, ವಿಜಯನಗರ, ಡಾ. ರಾಜಕುಮಾರ್ ರಸ್ತೆ, ವಾಟಾಳ್ ನಾಗರಾಜ್ ರಸ್ತೆಗಳಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಸೋಮವಾರ ರಾತ್ರಿ ರಸ್ತೆ ಗುಂಡಿ ದುರಸ್ತಿ ಪರಿಶೀಲಿಸಿದ್ದಾರೆ.
ನಗರದಲ್ಲಿ ಎಲ್ಲೂ ರಸ್ತೆ ಗುಂಡಿಗಳು ಇರಬಾರದು. ಯಾರಿಗೂ ಅಪಾಯ ಆಗಬಾರದು ಎಂಬುದು ನಮ್ಮ ಕಾಳಜಿ. ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ 400 ಅಧಿಕಾರಿಗಳು, ಎಂಜಿನಿಯರ್ಗಳಿಗೆ ರಸ್ತೆಗಿಳಿದು ಗುಂಡಿ ಮುಚ್ಚಲು ಸೂಚಿಸಿದ್ದೆ. 15 ದಿನ ಗಡುವು ನೀಡಿದ್ದೆ. 14,307 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ವರದಿ ನೀಡಿದ್ದಾರೆ. ಅದನ್ನು ರಸ್ತೆಗಳಲ್ಲಿ ಸಂಚರಿಸಿ ನಾನೇ ಪರಿಶೀಲಿಸುತ್ತಿದ್ದೇನೆ’ ಎಂದು ಈ ವೇಳೆ ತಿಳಿಸಿದ್ದಾರೆ.